BengaluruPolitics

ಇದುವರೆಗೆ ಶೇ.21ರಷ್ಟು ಮತದಾನ, ಬೆಂಗಳೂರಲ್ಲೂ ಬಿರುಸಿನ ಮತದಾನ

ಬೆಂಗಳೂರು; ಈ ಬಾರಿ ಎಲ್ಲೆಡೆ ಉತ್ತಮ ಮತದಾನವಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆಗೆ ರಾಜ್ಯಾದ್ಯಂತ ಶೇಕಡಾ 11ರಷ್ಟು ಮತದಾನವಾಗಿತ್ತು. ಇದೀಗ ಬೆಳಗ್ಗೆ 11ಗಂಟೆಗೆ ವೇಳೆ ಶೇ 21 ರಷ್ಟು ಮತದಾನ ನಡೆದಿದೆ. ಈಗಲೂ ಕೂಡಾ ಎಲ್ಲಾ ಮತಗಟ್ಟೆಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಅದ್ರಲ್ಲೂ ನೀರಸ ಮತದಾನವಾಗುತ್ತಿದ್ದ ಬೆಂಗಳೂರಿನಲ್ಲೂ ಎಲ್ಲರೂ ಆಸಕ್ತಿಯಿಂದ ಮತದಾನ ಮಾಡುತ್ತಿದ್ದಾರೆ. ಈ ಬಾರಿ ಬೆಂಗಳೂರು ನಗರದಲ್ಲೂ ಮತದಾನ ಉತ್ತಮವಾಗಿ ನಡೆಯಲಿದೆ.

ಕಳೆದ 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.72 ರಷ್ಟು ಮತದಾನ ನಡದಿತ್ತು. ಆದ್ರೆ ಬೆಂಗಳೂರಿನಲ್ಲಿ ಶೇ.54ರಷ್ಟು ಮತದಾನ ಮಾತ್ರ ನಡೆದಿತ್ತು. ಆದ್ರೆ ಈ ಬಾರಿ ಬೆಂಗಳೂರಿನಲ್ಲೂ ಉತ್ತಮ ಮತದಾನವಾಗುತ್ತಿದೆ.

 

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಶೇ.30ರಷ್ಟು ಮತದಾನವಾಗಿದೆ. ಕರಾವಳಿ ಕರ್ನಾಟಕದಲ್ಲಿ ಇದುವರೆಗೆ ಶೇ.27ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ನಗರದಲ್ಲಿ ಶೇ.18ರಷ್ಟು, ಕಲ್ಯಾಣ ಕರ್ನಾಟಕದಲ್ಲಿ 21, ಕಿತ್ತೂರು ಕರ್ನಾಟಕದಲ್ಲಿ ಶೇ.20ರಷ್ಟು ಮತದಾನವಾಗಿದೆ.

 

Share Post