CrimeDistricts

ಬೆಳಗಾವಿ ಬಳಿ ಎರಡು ಬಸ್‌ಗಳ ಮುಖಾಮುಖಿ ಡಿಕ್ಕಿ; ಸಂಚಾರ ಅಸ್ತವ್ಯಸ್ತ

ಬೆಳಗಾವಿ; ಬೆಳಗಾವಿ ಬಳಿ ಎರಡು ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಬೆಳಗಾವಿ-ಬಾಗಲಕೋಟೆ ಮಾರ್ಗದ ಹಲಕಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಎರಡು ಸರ್ಕಾರಿ ಬಸ್‌ಗಳು ಮುಖಾಮುಖಿಯಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೆಳಗಾವಿಯಿಂದ ಬಾಗಲಕೋಟೆಯತ್ತ ತೆರಳುತ್ತಿದ್ದ ಬಸ್‌ ಹಾಗೂ ಯರಗಟ್ಟಿಯಿಂದ ಬೆಳಗಾವಿಯತ್ತ ಬರುತ್ತಿದ್ದ ಇನ್ನೊಂದು ಬಸ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ಗಾಯಾಳುಗಳನ್ನು ಬೆಳಗಾವಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ಎರಡೂ ಬಸ್ಸುಗಳ ಚಾಲಕರು ಬಹುಬೇಗ ಎಚ್ಚೆತ್ತುಕೊಂಡು ಬ್ರೇಕ್‌ ಹಾಕಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಮುರಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share Post