Districts

ಹುಡುಗಿಗಾಗಿ 11,750 ಯುವಕರ ಕ್ಯೂ; ವಧು-ವರರ ಸಮಾವೇಶದಲ್ಲಿ ಕೇವಲ 250 ಯುವತಿಯರು..!

ಮಂಡ್ಯ; ಊಟಕ್ಕೆ ಕ್ಯೂ ನಿಲ್ಲೋದನ್ನು ನೋಡಿದ್ದೇವೆ. ಇಲ್ಲಿ ಯುವಕರು ಮದುವೆಯಾಗೋದಕ್ಕೆ ಕ್ಯೂ ನಿಂತಿದ್ದರು. ಹೌದು, ನಾವು ಹೇಳ್ತಾ ಇರೋದು ನಿಜ. ನಾಗಮಂಗಲದ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ರಿಜಿಸ್ಟರ್‌ ಮಾಡಿಸಲು ಯುವಕರು ಕ್ಯೂ ನಿಂತ ಘಟನೆ ನಡೆದಿದೆ. ಈ ಸಮಾವೇಶದಲ್ಲಿ ಕೇವಲ 250 ಯುವತಿಯರು ರಿಜಿಸ್ಟರ್‌ ಮಾಡಿಸಿದ್ದರೆ, 11,750 ಯುವಕರು ವಧು ಹುಡುಕುತ್ತಿರುವುದಾಗಿ ರಿಜಿಸ್ಟರ್‌ ಮಾಡಿಸಿದ್ದಾರೆ. ಅದೂ ಕೂಡಾ ಗಂಟೆಗಟ್ಟಲೆ ಕ್ಯೂ ನಿಂತು ರಿಜಿಸ್ಟರ್‌ ಮಾಡಿಸಿದ್ದು ವಿಶೇಷವಾಗಿತ್ತು. 

ಕೃಷಿ ಕೆಲಸ ಮಾಡುವ ಯುವಕರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಕೃಷಿ ಕೆಲಸವನ್ನೇ ಹೆಚ್ಚಾಗಿ ನಂಬಿಕೊಂಡಿರುವ ಮಂಡ್ಯ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಯುವಕರು ಮದುವೆಯಾಗಲು ಹುಡುಗಿ ಸಿಗದೇ ಪರದಾಡುತ್ತಿದ್ದರು. ಈ ನಡುವೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ವಧು-ವರರ ಸಮಾವೇಶ ಏರ್ಪಡಿಸಲಾಗಿತ್ತು. ಇದ್ರಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಧು-ವರರು ಭಾಗವಹಿಸಿದ್ದರು. ಅದ್ರಲ್ಲೂ 12 ಸಾವಿರ ಮಂದಿ ರಿಜಿಸ್ಟರ್‌ ಮಾಡಿಸಿದ್ದರೆ, ಅದರಲ್ಲಿ 250 ಮಂದಿ ಯುವತಿಯರು ಬಿಟ್ಟು ಉಳಿದೆಲ್ಲರೂ ಯುವಕರೇ ಆಗಿದ್ದರು.

 

Share Post