Districts

2029ರ ನಂತರ ಮೋದಿ ನಿವೃತ್ತಿ ಹೊಂದಲಿ; ಎಸ್‌ಎ.ಲ್‌.ಭೈರಪ್ಪ

ಮೈಸೂರು; ಪ್ರಧಾನಿ ನರೇಂದ್ರ ಮೋದಿಯವರು 2029ರ ನಂತರ ನಿವೃತ್ತಿ ಹೊಂದಬೇಕು. ಸೇವಾ ಮನೋಭಾವವಿರುವ ಮತ್ತೊಬ್ಬ ನಾಯಕನನ್ನು ಹುಟ್ಟು ಹಾಕಬೇಕು ಎಂದು ಸಾಹಿತಿ ಹಾಗೂ ಪದ್ಮಭೂಷಣ ಗೌರವಕ್ಕೆ ಆಯ್ಕೆಯಾಗಿರುವ ಎಸ್‌.ಎಲ್‌.ಭೈರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾನು 2019ರಲ್ಲೇ ಒಂದು ಲೇಖನ ಬರೆದಿದ್ದೆ. ಮತ್ತೊಮ್ಮೆ ಮೋದಿ ಅವರು ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಎಂದು ಬರೆದಿದ್ದೆ. ಈಗಲೂ 2024 ರಿಂದ 2029 ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. ನಂತರ ಅವರಂತ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ಹುಟ್ಟುಹಾಕಲಿ ಎಂದು ಹೇಳಿದರು.

ಮೋದಿಯಂತ ಪ್ರಧಾನ ಮಂತ್ರಿಯನ್ನ ನಾವು ಹಿಂದೆಂದೂ ನೋಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ಈ ಮಾತು ಹೇಳುತ್ತಿಲ್ಲ. ದೇಶದಲ್ಲಿ ಉತ್ತಮ ಆಡಳಿತವನ್ನ ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಈ ದೇಶಕ್ಕೆ ಬೇಕಿದೆ ಎಂದು ಎಸ್‌.ಎಲ್‌.ಬೈರಪ್ಪ ಇದೇ ವೇಳೆ ಹೇಳಿದರು.

Share Post