Districts

INCOME TAX RAID: ಉದ್ಯಮಿ ಮನೆ ಮೇಲೆ ಐಟಿ ದಾಳಿ; ನಾಗಮಂಗಲದ ಹಲವೆಡೆ ತಪಾಸಣೆ

ಮಂಡ್ಯ (MANDYA): ಮಂಡ್ಯ ಜಿಲ್ಲೆ ನಾಗಮಂಗಲದ (NAGAMANGALA) ಉದ್ಯಮಿ ಅಮಾನುಲ್ಲಾ ಮುರ್ತುಜಾ (AMANULLA MURTHUJA) ಅವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಜಾನೆಯೇ ದಾಳಿ ನಡೆಸಿರುವ ಹತ್ತಕ್ಕೂ ಹೆಚ್ಚು ಅಧಿಕಾರಿಗಳು, ಬೆಳಗ್ಗೆಯಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಸರಿಯಾಗಿ ಆದಾಯ ತೆರಿಗೆ (INCOME TAX RAID) ಕಟ್ಟುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸ್ಟಾರ್‌ ಗ್ರೂಪ್‌ ಎಂಬ ಸಂಸ್ಥೆ ಮಾಲೀಕರಾಗಿರುವ ಅಮಾನುಲ್ಲಾ ಮುರ್ತುಜಾ ಅವರು, ಕೋಳಿ ಸಾಕಾಣಿಕೆ, ಮೊಟ್ಟೆ, ಕೋಳಿ ಆಹಾರ ತಯಾರಿಕೆ ಘಟಕವನ್ನೂ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಅಮಾನುಲ್ಲಾ ಅವರು, ಸರಿಯಾಗಿ ಆದಾಯ ತೆರಿಗೆ ಕಟ್ಟುತ್ತಿರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಅವರ ಆಸ್ತಿ ಪಾಸ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

Share Post