Districts

ಪ್ರಧಾನಿ ಭದ್ರತೆಗೆ ನಿಲ್ಲಲಿವೆ ಎರಡು ಮುಧೋಳ ನಾಯಿಗಳು..!

ಬಾಗಲಕೋಟೆ; ಮುಧೋಳ ಶ್ವಾನಗಳು ಈಗ ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಸೇರಿವೆ. ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಈ ಶ್ವಾನಗಳು ಇದೀಗ ಪ್ರಧಾನಿಗೂ ಭದ್ರತೆ ನೀಡಲಿವೆ.

ಮುಧೋಳದ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಎಸ್ ಪಿಜಿ ವೈದ್ಯರ ತಂಡ ನಾಯಿಗಳನ್ನು ತೆಗೆದುಕೊಂಡು ಹೋಗಿದೆ. ಎರಡು ಗಂಡು ನಾಯಿ ಮರಿಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಲಾಗಿದ್ದು, ಇವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈಗಾಗಲೇ ಕೇರಳ,‌ ಕರ್ನಾಟಕ ಪೋಲಿಸ ಪಡೆ, ಬಿಎಸ್ಎಫ್ ನವರು ಮುಧೋಳದ ನಾಯಿಗಳನ್ನು‌ ಭದ್ರತೆಗೆ ಬಳಸಿಕೊಳ್ಳುತ್ತಿದ್ದಾರೆ.

Share Post