Districts

ಬೆಳಗಾವಿ ನಗರಕ್ಕೆ ನುಗ್ಗಿದ ಚಿರತೆ; ಕಟ್ಟಡ ಕಾರ್ಮಿಕನ ಮೇಲೆ ದಾಳಿ

ಬೆಳಗಾವಿ; ಕಾಡುಪ್ರಾಣಿಗಳು ನಾಡಿಗೆ ಬರೋದು ಸಾಮಾನ್ಯದ ಸಂಗತಿಯಾಗಿಬಿಟ್ಟಿದೆ.. ಬೆಳಗಾವಿಯಲ್ಲಿ ಇವತ್ತು ಮಧ್ಯಾಹ್ನದ ಸಮಯದಲ್ಲಿ ಚಿರತೆಯೊಂದು ಬೆಳಗಾವಿ ನಗರಕ್ಕೆ ನುಗ್ಗಿದೆ. ಇಲ್ಲಿನ ಜಾಧವ ನಗರದಲ್ಲಿ ಚಿರತೆ ದಾಳಿ ಮಾಡಿದ್ದು, ಕಟ್ಟಡ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ. ನಗರದ ಮಧ್ಯ ಭಾಗದಲ್ಲಿಯೇ ಚಿರತೆ ನಗ್ಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರು ಕೆಲಸದಲ್ಲಿ ನಿರತರಾದ ವೇಳೆ ಅವರ ಮೇಲೆ ಎಗರಿದ ಚಿರತೆ ಭುಜಕ್ಕೆ ಪರಚಿದೆ. ಅಲ್ಲಿ ಜನರ ಚೀರಾಟ ಕೇಳಿದ ನಂತರ ಓಡಿ ಹೋಗಿ ಪೊದೆಯಲ್ಲಿ ಅವಿತುಕೊಂಡಿದೆ. ಇದೇ ಜಾಗದಲ್ಲಿರುವ ಯಶೋಧನ್ ಜಾಧವ ಎನ್ನುವವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿದ್ದು, ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಅವಿತಿರುವ ಜಾಗದ ಶೋಧ ನಡೆಸಿದರು. ಈಚೆಗಷ್ಟೇ ಸವದತ್ತಿ, ಮುನವಳ್ಳಿ, ಚಿಕ್ಕೋಡಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿಯೂ ಚಿರತೆ ಓಡಾಡಿದ ಗುರುತುಗಳು ಪತ್ತೆಯಾಗಿದ್ದವು. ಆದರೆ, ಈಗ ಜನವಸತಿ ಇರುವ ಪ್ರದೇಶದಲ್ಲಿಯೇ ಚಿರತೆ ಕಂಡಿದೆ.

Share Post