DistrictsLifestyle

1 ಲಕ್ಷ 80 ಸಾವಿರ ರೂ. ಬೆಲೆಯ ಅಪರೂಪದ ಮೀನು ಪತ್ತೆ..!

ಉಡುಪಿ: ಸಮುದ್ರದಲ್ಲಿ ಆಗಾಗ ಅಪರೂಪದ ಮೀನುಗಳು ಸಿಗುತ್ತಿರುತ್ತವೆ. ಅದರಂತೆ ಬುಧವಾರ ಕೂಡಾ ಉಡುಪಿಯ ಮಲ್ಪೆ ಬೀಚ್‌ಗಲ್ಲಿ ಅಪರೂಪದ ಮೀನೊಂದು ಸಿಕ್ಕಿದೆ. ಈ ಮೀನು ಮೀನುಗಾರ ಭಾರಿ ಲಾಭವನ್ನೂ ತಂದೊಕೊಟ್ಟಿದೆ.

ಹೌದು, ಮಲ್ಪೆಯಲ್ಲಿ ಸಿಕ್ಕ ಈ ಮೀನಿನ ದರ ಕೇಳಿದರೆ ಶಾಕ್ ಆಗುವುದರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಈ ಮೀನಿನ ಬೆಲೆ ಕೆಜಿಗೆ ಬರೋಬ್ಬರಿ 9,060 ರೂಪಾಯಿ. ಅದೂ ಕೂಡಾ ಜನ ಮೇಲೆ ಬಿದ್ದ ಕೊಂಡುಕೊಂಡು ಹೋಗಿದ್ದಾರೆ. ಬೀಚ್‌ ನಲ್ಲಿ ಸಿಕ್ಕ ಮೀನು ಒಟ್ಟು ೨೦ ಕೆಜಿ ತೂಕದ್ದಾಗಿದ್ದು, ಸುಮಾರು 1,80,000 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆಯಿಂದ ಸೋಮವಾರ ಮೀನುಗಾರಿಕೆಗೆ ಹೋಗಿದ್ದಾಗ ಬಲರಾಮ್ ಹೆಸರಿನ ಬೋಟಿಗೆ ಈ ದುಬಾರಿ ಮೀನು ಬಿದ್ದಿದ್ದು, ಮೀನುಗಾರನಿಗೆ ಅದೃಷ್ಟ ಖುಲಾಯಿಸಿದೆ.

ಸುಮಾರು ಒಂದು ಲಕ್ಷ ಎಂಬತ್ತು ಸಾವಿರಕ್ಕೆ ಮಾರಾಟವಾದ ಮೀನಿನ ಹೆಸರು ಗೋಳಿ ಮೀನು. ಕೆಲವೊಮ್ಮೆ ಮಾತ್ರ ಮೀನುಗಾರರಿಗೆ ಸಮುದ್ರದಲ್ಲಿ ಸಿಗುವ ಅಪರೂಪದ ಮೀನು ಇದು. ಈ ಮೀನು ಬಲೆಗೆ ಬಿದ್ದರೆ ದೊಡ್ಡ ಲಾಭ ತಂದುಕೊಡುತ್ತದೆ. ಶಾಮ್ ರಾಜ್ ತೊಟ್ಟಂರವರ ಬಲರಾಮ್ ಹೆಸರಿನ ಬೋಟಿಗೆ ಮೀನು ಸಿಕ್ಕಿದೆ. ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಅಂತ ಕರೆಯುವ ಈ ಮೀನಿನ ಮತ್ತೊಂದು ಹೆಸರು ಫೋಲ್ ಫಿಶ್. ಈ ಮೀನು ಹೆಚ್ಚು ಬೆಲೆ ಬಾಳುವುದರಿಂದ ಸೀ ಗೋಲ್ಡ್ ಅಂತ ಕರೆಯುತ್ತಾರೆ. ಈ ಮೀನು ತಿನ್ನಲು ಬಹಳಷ್ಟು ರುಚಿಯಾಗಿರುತ್ತದೆ. ಅಲ್ಲದೇ ಸೌಂದರ್ಯವಧಕಕ್ಕೂ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

Share Post