ಮಂಡ್ಯದಲ್ಲಿ ಮತ್ತೆ ಜೆಡಿಎಸ್ಗೆ ಮುಖಭಂಗ; ಮನ್ಮುಲ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ಮಂಡ್ಯ; ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಜೆಡಿಎಸ್ ಮುಗ್ಗರಿಸಿತ್ತು. ಇದೀಗ ಅದೇ ಸ್ಥಳದಲ್ಲಿ ಜೆಡಿಎಸ್ ಮತ್ತೊಂದು ಆಘಾತವಾಗಿದೆ. ಮನ್ಮುಲ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಅವರು ಮನ್ಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಬ್ಬ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ನಾಲ್ವರು ಅಧಿಕಾರಿಗಳ ನೆರವಿನಿಂದ ಕಾಂಗ್ರೆಸ್ ಅಧಿಕಾರ ಹಿಡಿದೆ. ಅಧ್ಯಕ್ಷ ಸ್ಥಾನಕ್ಕೇರಲು 9 ಮತಗಳು ಬೇಕಿದ್ದವು. ಕೋರಂ ಅಭಾವ ಉಂಟಾಗಲಿ ಎಂದು ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೈರಾಗಿದ್ದರು. ಆದ್ರೆ ಕಾಂಗ್ರೆಸ್ ತನ್ನ ಬೆಂಬಲಿತ ನಿರ್ದೇಶಕರು, ಒಬ್ಬರು ನಾಮನಿರ್ದೇಶಿತರು, ನಾಲ್ವರು ಅಧಿಕಾರಿಗಳು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರ ಬೆಂಬಲದಿಂದ ಅಧಿಕಾರ ಹಿಡಿದಿದೆ. ಇದರಿಂದ ಜೆಡಿಎಸ್ಗೆ ಮುಖಭಂಗವಾಗಿದೆ.