International

ಉಗ್ರರೂಪ ತಾಳಿದ ಗಜರಾಜ: ಕಾರಿಗೆ ಉರುಳುಸೇವೆ

ದಕ್ಷಿಣ ಆಫ್ರಿಕಾ:   ಪ್ರಾಣಿಗಳು ಸಾಮಾನ್ಯವಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ. ಅವುಗಳಿಗೆ ಹಾನಿಯಾಗುವ ವಿಷಯ ತಿಳಿದರೆ ಮಾತ್ರ ಉಗ್ರ ಸ್ವರೂಪ ತಾಳುತ್ತವೆ. ವೈರಲ್‌ ವಿಡಿಯೋದಲ್ಲಿಯೂ ಸಹ ಕೊಪಗೊಂಡ ಆನೆಯೊಂದು ಕಾರನ್ನು ಪಲ್ಟಿ ಹೊಡೆಸಿದೆ. ಇದು ದಕ್ಷಿಣ ಆಫ್ರಿಕಾದ ವೆಟ್ಲ್ಯಾಂಡ್‌ ಪಾರ್ಕ್‌ನಲ್ಲಿ ನಡೆದಿದೆ. ಆ ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಕಾರಿನಲ್ಲಿದ್ದ, ಆನೆಯ ಕೋಪಕ್ಕೆ ತುತ್ತಾಗಿದ್ದಾರೆ. ನಾಲ್ವರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋದಲ್ಲಿ ಆನೆ ಕಾರನ್ನು ತಳ್ಳುತ್ತಿರುವ ದೃಶ್ಯ ನೋಡಿದ್ರೆ ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವುದು ನೆನಪಾಗುತ್ತದೆ.

ಆನೆಯ ರೋಷಾವೇಷವನ್ನು ಸ್ವಲ್ಪ ದೂರದಲ್ಲಿ ಮತ್ತೊಂದು ಕಾರಿನಲ್ಲಿದ್ದವರು ಚಿತ್ರೀಕರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಕಂಡು ನೆಟ್ಟಿಗರು ಹೌರಾರಿದ್ದಾರೆ. ಆನೆ ಸ್ಥಳದಿಂದ ತೆರಳಿದ ಬಳಿಕ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಯಿತು.

Share Post