CrimeDistricts

ಅಂತರ್ಜಾತಿ ವಿವಾಹವಾದ ವಿಕಲಚೇತನರಿಗೆ ಬಹಿಷ್ಕಾರ; ಬೀದಿಗೆ ಬಿದ್ದ ಬಾಣಂತಿ

ಚಿತ್ರದುರ್ಗ; ಪ್ರಪಂಚ ಎಷ್ಟೇ ಮುಂದುವರೆದರೂ ನಮ್ಮಲ್ಲಿನ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯವಿಲ್ಲವೇನೋ.. ಯಾಕಂದ್ರೆ ಜಾತಿ ಕಾರಣಕ್ಕೆ ಬಹಿಷ್ಕಾರ ಹಾಕುವಂತಹ ಪ್ರಕರಣಗಳು ಇಂದಿಗೂ ನಡೆಯುತ್ತಲೇ ಇವೆ. ಚಿತ್ರದುರ್ಗ ಜಿಲ್ಲೆಯಲ್ಲೂ ಇಂತಹದ್ದೊಂದು ಘಟನೆ ನಡೆದಿದೆ. ಅಂತರ್ಜಾತಿ ವಿವಾಹವಾಗಿದ್ದ ವಿಕಲಚೇತನ ದಂಪತಿಗೆ ಗ್ರಾಮಸ್ಥರು 3o ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲದೆ ಗ್ರಾಮದಿಂದ ಬಹಿಷ್ಕಾರ ಕೂಡಾ ಹಾಕಿದ್ದಾರೆ.

ಇಲ್ಲಿನ ಎನ್ ದೇವರಹಳ್ಳಿ ಗ್ರಾಮದಲ್ಲಿ ಇಂತಹದ್ದೊಂದು ಅಮಾನವೀಯತೆ ಮೆರೆಯಲಾಗಿದೆ.ಿದೇ ಗ್ರಾಮದ ಸಾವಿತ್ರಮ್ಮ ಎಂಬುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಸಾವಿತ್ರಮ್ಮನಿಗೆ ಕಿವಿ ಕೇಳಿಸೋದಿಲ್ಲ, ಮಾತು ಬರೋದಿಲ್ಲ. ಇವರು ಆಂಧ್ರ ಮೂಲದ ಮಣಿಕಂಠ ಎಂಬಾತನನ್ನು ವಿವಾಹವಾಗಿದ್ದಾರೆ. ಮೂರು ವರ್ಷದ ಹಿಂದೆ ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಈ ದಂಪತಿಗೆ ಮಗು ಆಗಿದೆ. ಈ ಕಾರಣಕ್ಕಾಗಿ ಮಗುವಿನೊಂದಿಗೆ ದಂಪತಿ ಸಾವಿತ್ರಮ್ಮ ಅವರ ತವರಿಗೆ ಬಂದಿದ್ದಾರೆ.

ಆದ್ರೆ ಊರಿಗೆ ಬರುತ್ತಿದ್ದಂತೆ ಗ್ರಾಮದ ಹಿರಿಯರು ಈ ಜೋಡಿಗೆ ಬಹಿಷ್ಕಾರ ಹಾಕಿದ್ದಾರೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ 30 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ಸಾವಿತ್ರಮ್ಮ ಬಾಣಂತಿ, ಹಸುಗೂಸು ಹಿಡಿದುಕೊಂಡು ಬಂದಿದ್ದ ಆಕೆಯ ಬಗ್ಗೆ ಕಿಂಚಿತ್ತೂ ಕರುಣೆ ತೋರಿಸಿಲ್ಲ. ಹೀಗಾಗಿ ವಿಧಿ ಇಲ್ಲದೆ ಜೋಡಿ ಬೆಂಗಳೂರಿಗೆ ವಾಪಸ್ಸಾಗಿತ್ತು. ಇದೀಗ ದಂಪತಿ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದೆ.

 

Share Post