CrimeNational

ಭೋಪಾಲ್‌ನಲ್ಲಿ ಪಟಾಕಿ ದುರಂತ; ನಾಲ್ವರು ದಾರುಣ ಸಾವು

ಭೋಪಾಲ್; ದೀಪಾವಳಿ ಹಬ್ಬಕ್ಕೆ ಅಂತ ಪಟಾಕಿ ಜೋಡಿಸಿಟ್ಟಿದ್ದ ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಿ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬನ್ಮೋರ್‌ ಎಂಬ ನಗರದ ಗೋಡೌನ್‌ ಒಂದರಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಅದಕ್ಕೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದೆ.  

ಘಟನೆಯಲ್ಲಿ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಒಂದಷ್ಟು ಜನ ಸಿಲುಕಿರುವ ಬಗ್ಗೆ ಶಂಕಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

 

Share Post