ಎರಡು, ಮೂರು ದಿನ ಕಾಯುತ್ತೇನೆ, ಮತ್ತೆ ಎಲ್ಲವನ್ನೂ ಹೊರಗಾಕುತ್ತೇನೆ; ವಿ.ಸೋಮಣ್ಣ
ತುಮಕೂರು; ಡಿಸೆಂಬರ್ 6ರ ನಂತರ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಈ ಹಿಂದೆ ಹೇಳಿದ್ದರು. ಇದೀಗ ತುಮಕೂರಿನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲ ನಾಯಿ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಯ್ತು ಎಂದಿರುವ ಅವರು, ಇನ್ನು ಎರಡು ಮೂರು ದಿನ ಕಾಯುತ್ತೇನೆ. ಮತ್ತೆ ಎಲ್ಲವನ್ನೂ ಹೊರಹಾಕುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಪ್ರತಿಕ್ರಿಗೆ ನಾನು ಇನ್ನೂ ಎರಡು ಮೂರು ದಿನ ಕಾಯುತ್ತೇನೆ. ನವೆಂಬರ್ 30ರಂದು ಹೈಕಮಾಂಡ್ ಟೈಮ್ ಕೊಟ್ಟಿತ್ತು. ಆದ್ರೆ ನಾನು ಅಂದು ಹೋಗೋದಕ್ಕೆ ಆಗಲಿಲ್ಲ ಎಂದೂ ಸೋಮಣ್ಣ ಇದೇ ವೇಳೆ ಹೇಳಿದ್ದಾರೆ. ಸೋಮಣ್ಣ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಜೊತೆ ಭಾಗವಹಿಸಿದ್ದರು.