BengaluruCrimeDistrictsPolitics

ಐಸಿಸ್‌ ಸಂಪರ್ಕ ಹೊಂದಿರುವ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡ ಸಿಎಂ?; ದಾಖಲೆ ನೀಡಿದ ಶಾಸಕ ಯತ್ನಾಳ್‌

ಬೆಳಗಾವಿ; ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಐಸಿಸ್‌ ನಂಟಿರುವ ವ್ಯಕ್ತಿ ವೇದಿಕೆ ಹಂಚಿಕೊಂಡಿದ್ದ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪ ಮಾಡಿದ್ದರು. ಇದೀಗ ಅದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ರಿಲೀಸ್‌ ಮಾಡಿದ್ದಾರೆ. ಅವರ ಟ್ವಿಟರ್‌ ಖಾತೆಯಲ್ಲಿ ಯತ್ನಾಳ್‌ ಅವರು ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಜೊತೆ ಇದ್ದ ವ್ಯಕ್ತಿಯೊಬ್ಬರನ್ನು ಮಾರ್ಕ್‌ ಮಾಡಿರುವ ಯತ್ನಾಳ್‌ ಅವರು, ಈತ ತನ್ವೀರ್‌ ಪೀರಾ ಆಗಿದ್ದು, ಈತನಿಗೆ ಮಧ್ಯಪ್ರಾಚ್ಯ ದೇಶಗಳ ಕೆಲವರೊಂದಿಗೆ ಸಂಬಂಧ ಇದೆ. ಭಯೋತ್ಪಾದಕ ಸಹಾನುಭೂತಿ ಮತ್ತು ತೀವ್ರಗಾಮಿ ಇಸ್ಲಾಮಿಕ್ ಕಾರ್ಯಕರ್ತರನ್ನು ತನ್ವೀರ್‌ ಪೀರಾ ವಿದೇಶಗಳಲ್ಲಿ ಭೇಟಿಯಾಗಿ ಬಂದಿದ್ದಾನೆ ಎಂದು ಯತ್ನಾಳ್‌ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೆಲವು ವಿದೇಶಿ ವ್ಯಕ್ತಿಗಳ ಜೊತೆ ತನ್ವೀರ್‌ ಪೀರಾ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಸದನದಲ್ಲಿ ಮಾರ್ದನಿಸುವ ಸಾಧ್ಯತೆ ಇದೆ. ಮಧ್ಯಾಹ್ನ ಯತ್ನಾಳ್‌ ಅವರು ಸದನದಲ್ಲಿ ಈ ಫೋಟೋಗಳನಬ್ನು ಪ್ರದರ್ಶಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಡಿಸೆಂಬರ್‌ ನಾಲ್ಕರಂದು ಬೆಳಗಾವಿಯ ಬಾಷಾಪೀರ್‌ ದರ್ಗಾ ಬಳಿ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶ ನಡೆದಿತ್ತು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಐಸಿಸ್‌ ಸಂಪರ್ಕ ಇರುವ ವ್ಯಕ್ತಿ ಕೂತಿದ್ದರು ಎಂದು ಯತ್ನಾಳ್‌ ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಆರೋಪ ಮಾಡಿದ್ದರು.

Share Post