ಬಾಲರಾಮ ಪ್ರತಿಷ್ಠಾಪನೆ ದಿನ ಶಾಲೆಗೆ ಗೈರಾದರೆ 1000 ರೂ. ದಂಡ; ವಿವಾದಕ್ಕೀಡಾದ ಖಾಸಗಿ ಶಾಲೆ
ಚಿಕ್ಕಮಗಳೂರು; ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಈ ದಿನ ಯಾರೇ ಶಾಲೆಗೆ ಗೈರಾದರೂ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಖಾಸಗಿ ಶಾಸಲೆಯೊಂದು ಎಚ್ಚರಿಕೆ ಕೊಟ್ಟಿದೆ. ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಶಾಲಾ ಆಡಳಿತ ಮಂಡಳಿ ಇಂತಹದ್ದೊಂದು ಎಚ್ಚರಿಕೆ ಕೊಟ್ಟಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಶಾಲೆ ಮುಂದೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೆ ಶಾಲೆ ಪರವಾಗಿ ಸ್ಪಷ್ಟನೆ ಸಿಕ್ಕಿದೆ. ಮಾಧ್ಯಮಗಳ ಜೊತೆ ಶಾಲೆಯ ಪ್ರಾಂಶುಪಾಲರು ಮಾತನಾಡಿದ್ದು, ಅಯೋಧ್ಯೆಗೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 3-4 ದಿನ ರಜೆ ಇದ್ದಾಗ ಮುಂದಿನ ದಿನ ಮಕ್ಕಳು ಶಾಲೆಗೆ ಬರೋದಿಲ್ಲ. ಹೀಗಾಗಿ ಅಂತಹ ಸಮಯದಲ್ಲಿ ಕರೆದು ಹೇಳಲಾಗುತ್ತದೆ. ಅದೇ ರೀತಿ ಬಾರಿಯೂ ಎಚ್ಚರಿಕೆ ಕೊಟ್ಟಿದ್ದೇವೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಎಚ್ಚರಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.