BengaluruDistricts

ರಾಮನ ವಿಗ್ರಹಕ್ಕೆ ಬಳಕೆ ಮಾಡಿದ ಕಲ್ಲು ಸಿಕ್ಕ ಜಾಗದಲ್ಲಿ ದೇವಾಲಯ ನಿರ್ಮಾಣ; ಜಿಟಿಡಿ

ಮೈಸೂರು; ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಬಾಲರಾಮನ ವಿಗ್ರಹವನ್ನು ಮೈಸೂರಿನ ಕಲಾವಿದ ಕೆತ್ತಿದ್ಧಾರೆ ಅನ್ನೋದು ಎಲ್ಲರಿಗೂ ಗೊತ್ತು. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದ ಜಮೀನೊಂದರಲ್ಲಿ ಮೂರ್ತಿ ಕೆತ್ತನೆಗೆ ಬೇಕಾದ ಕಲ್ಲು ಶಿಲೆ ಸಿಕ್ಕಿತ್ತು. ಇದೀಗ ಇದೇ ಜಾಗದಲ್ಲಿ ರಾಮನ ಮಂದಿರ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ. ಜನವರಿ 22ರಂದೇ ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಜಮೀನಿನ ಮಾಲೀಕ ರಾಮದಾಸ್‌ ಅವರು ರಾಮನ ದೇಗುಲ ನಿರ್ಮಾಣಕ್ಕೆ 4 ಗುಂಟೆ ಜಮೀನು ಬಿಟ್ಟುಕೊಡಲು ಸಂತೋಷದಿಂದ ಒಪ್ಪಿದ್ದಾರೆ. ರಾಮದಾಸ್‌ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ರಾಮಮಂದಿರಕ್ಕಾಗಿ ಜಮೀನನ್ನೇ ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದು ನಮಗೆ ಹೆಮ್ಮೆ ತರುವ ವಿಚಾರ ಎಂದು ಶಾಸಕ ಜಿಟಿಡಿ ಹೇಳಿದ್ದಾರೆ.

ಮೂರ್ತಿ ಕೆತ್ತನೆಗೆ ಅರುಣ್‌ ಯೋಗಿರಾಜ್‌ ಅವರನ್ನೇ ಸಂಪರ್ಕಿಸುತ್ತೇವೆ. ಅವರ ನಿರ್ದೇಶನದಂತೆಯೇ ನಡೆಯುತ್ತೇವೆ ಎಂದೂ ಜಿ.ಟಿ.ದೇವೇಗೌಡರು ಹೇಳಿದ್ದಾರೆ.

Share Post