CrimeNational

ಶ್ರದ್ಧಾ ಕೊಲೆ ಹಿಂದೆ ದೊಡ್ಡ ಷಡ್ಯಂತ್ರವಿದೆ; ಶ್ರದ್ಧಾ ಸ್ನೇಹಿತ

ಮುಂಬೈ; ಶ್ರದ್ಧಾ ಕೊಲೆ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆಕೆಯ ಸ್ನೇಹಿತರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಶ್ರದ್ಧಾ ದೆಹಲಿಗೆ ಹೋಗುವ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಪರಿಚಯವಾಗಿದ್ದು ಸ್ನೇಹಿತರಿಗೆ ಅಲ್ತಾಫ್‌ ಜೊತೆಗಿನ ಸಂಬಂಧ ಸ್ನೇಹಿತರಿಗೆ ಗೊತ್ತಿತ್ತು. ಇನ್ನು ಅಫ್ತಾಬ್‌ ತನ್ನನ್ನು ಕೊಲ್ಲುತ್ತಾನೆ ಎಂದು ಶ್ರದ್ಧಾ ಕೆಲ ತಿಂಗಳ ಹಿಂದೆ ಆತಂಕ ವ್ಯಕ್ತಪಡಿಸಿದ್ದಾಗಿ ಸ್ನೇಹಿತನೊಬ್ಬ ಹೇಳಿಕೊಂಡಿದ್ದಾನೆ.

ಶ್ರದ್ಧಾ ಹಾಗೆ ಹೇಳಿದ ಕೆಲ ದಿನಗಳ ನಂತರ ಆಕೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಸ್ನೇಹಿತ ಅವರ ಪೋಷಕರಿಗೆ ಮಾಹಿತಿ ತಿಳಿಸಿದ್ದ, ಒಂದು ಬಾರಿ ಶ್ರದ್ಧಾ ನನಗೆ ಮೆಸೇಜ್‌ ಮಾಡಿದ್ದಳು. ತನ್ನನ್ನು ಕರೆದುಕೊಂಡು ಹೋಗುವಂತೆ ವಿನಂತಿ ಮಾಡಿದ್ದಳು. ಇಲ್ಲದಿದ್ದರೆ ಅಲ್ತಾಫ್‌ ತನ್ನನ್ನು ಕೊಲ್ಲೋ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಳು ಎಂದು ಶ್ರದ್ಧಾ ಸ್ನೇಹಿತ ಹೇಳಿದ್ದಾನೆ. ಜುಲೈನಲ್ಲಿ ಶ್ರದ್ಧಾ ಅವರಿಂದ ಮೊಬೈಲ್‌ ಸಂದೇಶ ಬಂದಿತ್ತು. ಆದರೆ ಆಗಸ್ಟ್‌ ಬಳಿಕ ಆಕೆ ಸಂಪರ್ಕಕ್ಕೆ ಸಿಗಲಿಲ್ಲ. ಇದ್ರಿಂದ ಗಾಬರಿಯಾಯಿತು ಎಂದು ಸ್ನೇಹಿತ ಹೇಳಿಕೊಂಡಿದ್ದಾನೆ. ಆರೋಪಿ ಅಲ್ತಾಫ್‌ ಹಿನ್ನೆಲೆಯನ್ನು ಪೊಲೀಸರು ಪತ್ತೆ ಮಾಡಬೇಕು. ಕೊಲೆ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದಾನೆ.

Share Post