CrimeDistricts

ಪತ್ನಿ ಮೇಲೆ ಪತಿಗೆ ಅನುಮಾನ; ಫೋನ್‌ ಪಿಕ್‌ ಮಾಡದಿದ್ದಕ್ಕೆ ಹೆಂಡತಿಯನ್ನು ಕೊಲೆಗೈದ ಪೊಲೀಸಪ್ಪ!

ಬೆಂಗಳೂರು; ನೂರೈವತ್ತು ಬಾರಿ ಫೋನ್‌ ಮಾಡಿದರೂ ಪತ್ನಿ ತೆಗೆದಿಲ್ಲ. ಇದರಿಂದ ಆಕ್ರೋಶಗೊಂಡ ಪೊಲೀಸಪ್ಪ ಸುಮಾರು 230 ಕಿಲೋ ಮೀಟರ್‌ ದೂರದ ತವರು ಮನೆಯಲ್ಲಿದ್ದ ಪತ್ನಿಯನ್ನು ಹುಡುಕಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಸಾಲದೆಂಬಂತೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಟ್ಟ ಹಲಸೂರಿನಲ್ಲಿ ಈ ಘಟನೆ ನಡೆದಿದೆ. 

ಪ್ರತಿಭಾ ಎಂಬಾಕೆಯೇ ಕೊಲೆಯಾದ ದುರ್ದೈವಿ. ಆರೋಪಿ ಪತಿ ಕಿಶೋರ್‌ ಪೊಲೀಸ್‌ ಪೇದೆಯಾಗಿದ್ದ. ಇನ್ನೂ 2022ರಲ್ಲಿ ಇವರಿಬ್ಬರ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ಪತ್ನಿಯ ಬಗ್ಗೆ ಕಿಶೋರ್‌ ಅನುಮಾನ ಹೊಂದಿದ್ದ. ಪತ್ನಿಯ ಮೊಬೈಲ್‌ನ್ನು ಆಗಾಗ ಚೆಕ್‌ ಮಾಡುತ್ತಿದ್ದ. ಇದರಿಂದ ಪತ್ನಿ ಬೇಸತ್ತಿದ್ದಳು. ಇನ್ನು ಇವರಿಗೆ ಇತ್ತೀಚೆಗೆ ಹೆಣ್ಣು ಮಗು ಕೂಡಾ ಆಗಿತ್ತು. ಹೀಗಾಗಿ ಪ್ರತಿಭಾ ತವರು ಮನೆಗೆ ಹೋಗಿದ್ದಳು. ಪತಿ ಅನುಮಾನ ವ್ಯಕ್ತಪಡಿಸುತ್ತಿದ್ದರಿಂದಾಗಿ ಮೊಬೈಲ್‌ ಬಳಸಬೇಡ ಎಂದು ಆಕೆಯ ತಾಯಿ ಹೇಳಿದ್ದಳಂತೆ. ಹೀಗಾಗಿ ಪ್ರತಿಭಾ ಮೊಬೈಲ್‌ನ್ನು ಬಳಸಿಲ್ಲ. ಈ ವೇಳೆ ಕಿಶೋರ್‌ ಕರೆ ಮಾಡಿದ್ದಾನೆ. ಆಕೆ ರಿಸೀವ್‌ ಮಾಡದಿದ್ದರಿಂದ ಆಕ್ರೋಶಗೊಂಡು ಮಾವನ ಮನೆಗೆ ಬಂದು ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಕತ್ತು ಹಿಸುಕಿ ಕೊಲೆ ಮಾಡಿರುವ ಕಿಶೋರ್‌ ನಂತರ ತಾನೂ ವಿಷ ಸೇವಿಸಿದ್ದಾನೆ. ಕಿಶೋರ್‌ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 

Share Post