BengaluruEconomy

ಚಿಂದಿ ಆಯುವವನಿಗೆ ಸಿಕ್ತು 2.5 ಮಿಲಿಯನ್‌ ಡಾಲರ್‌ ಹಣ!

ಬೆಂಗಳೂರು; ಚಿಂದಿ ಆಯುವ ಹುಡುಗನಿಗೆ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಅಮೆರಿಕನ್‌ ಡಾಲರ್‌ ಹಣ ಸಿಕ್ಕಿದೆ. ಹೆಬ್ಬಾಳ ಸಮೀಪದ ರೈಲ್ವೆ ಹಳಿ ಬಳಿ ಈ ಹಣ ಬ್ಯಾಗ್‌ ಸಿಕ್ಕಿದ್ದು, ಚಿಂದಿ ಆಯುವ ಹುಡುಗ ಪೊಲೀಸರಿಗೆ ಅದನ್ನು ಒಪ್ಪಿಸಿದ್ದಾನೆ. ಅದು ಅಸಲಿಯೋ, ನಕಲಿಯೋ ಗೊತ್ತಾಗುತ್ತಿಲ್ಲ. ಹೀಗಾಗಿ ಪೊಲೀಸರು ಪರೀಕ್ಷೆಗಾಗಿ ಆರ್‌ಬಿಐಗೆ ಆ ಹಣವನ್ನು ಕಳುಹಿಸಿದ್ದಾರೆ.

ಚಿಂದಿ ಆಯಲು ಬಂದಿದ್ದ ಹುಡುಗನಿಗೆ ಪೊದೆಯಲ್ಲಿ ಒಂದು ಬ್ಯಾಗ್‌ ಕಾಣಿಸಿದೆ. ಕೂಡಲೇ ಆತ ತನ್ನ ಹಿರಿಯರಿಗೆ ಕರೆ ಮಾಡಿ ತಿಳಿಸಿದ್ದಾನೆ. ಅನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದಾರೆ. ಇನ್ನು ವಶಕ್ಕೆ ಪಡೆದ ಡಾಲರ್ಸ್ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್​ನಲ್ಲಿರೋ ಪತ್ರವೊಂದು ಸಿಕ್ಕಿದೆ. ಅಮೆರಿಕದಿಂದ ಅಭಿವೃದ್ಧಿಗಾಗಿ ಕಳುಹಿಸಲಾದ ಹಣ ಇದು ಎಂದು ಅದರಲ್ಲಿ ಬರೆಯಲಾಗಿದೆ.

ಸದ್ಯ ಹೆಬ್ಬಾಳ ಪೊಲೀಸರಿಗೆ ಈ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ.

 

Share Post