Districts

HIJAB ROW: ಕೋರ್ಟ್‌ ಸೂಚನೆ ಉಲ್ಲಂಘನೆ; ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು, ಶಿಕ್ಷಕಿ

ಬೆಂಗಳೂರು: ಅಂತಿಮ ಆದೇಶ ಬರುವವರೆಗೂ ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಗುರುತುಗಳಿಗೆ ಅವಕಾಶ ನೀಡಬೇಡಿ ಎಂದು ಹೈಕೋರ್ಟ್‌ ಹೇಳಿದೆ. ಹೀಗಿದ್ದರೂ, ಮಂಡ್ಯ ಹಾಗೂ ಕಲಬುರಗಿಯಲ್ಲಿ ಹಿಜಾಬ್‌ ಧರಿಸಿಯೇ ವಿದ್ಯಾರ್ಥಿನಿಯರು ಶಾಲೆಗೆ ಬಂದಿದ್ದಾರೆ. ಮಂಡ್ಯದಲ್ಲಿ ಶಿಕ್ಷಕಿಯೊಬ್ಬರು ಕೂಡಾ ಬುರ್ಕಾ ಧರಿಸಿ ಬಂದ್ದಾರೆ.

  ಮಂಡ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಬುರ್ಕಾ ಧರಿಸಿ ಬಂದಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಗೇಟ್‌ನಲ್ಲಿ ಶಿಕ್ಷಕಿಯನ್ನು ತಡೆದಿದ್ದಾರೆ. ಹೀಗಾಗಿ ಶಿಕ್ಷಕಿ ಬುರ್ಕಾ ತೆಗೆದು ಶಾಲೆ ಪ್ರವೇಶಿಸಿದ್ದಾರೆ. ಇನ್ನು ಕಲಬುರಗಿಯಲ್ಲಿಯೂ ಶಾಲಾ ಶಿಕ್ಷಕಿಯರು ಹಿಜಾಬ್ ಧರಿಸಿಯೇ ಬಂದಿದ್ದಾರೆ. ಬಂದವರೆ ಸ್ಟಾಫ್​​ ರೂಮ್ ನಲ್ಲಿ ಕುಳಿತಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Share Post