Bengaluru

ವಿಧಾನಮಂಡಲ ಜಂಟಿ ಅಧಿವೇಶನ: ರಾಜ್ಯಪಾಲ ಗೆಹ್ಲೋಟ್‌ರಿಂದ ಭಾಷಣ

ಬೆಂಗಳೂರು: ವಿಧಾನಮಂಡಲ ಜಂಟೊ ಅಧಿವೇಶನ ಶುರುವಾಗಿದೆ. ಇಂದಿನಿಂದ ಹತ್ತು ದಿನಗಳ ಕಾಲ ಫೆಬ್ರವರಿ 25ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಮೊದಲ ದಿನವಾದ ಇಂದು ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಚರ್ಚೆ, ಪ್ರಶ್ನೋತ್ತರ ಸೇರಿದಂತೆ ಕಲಾಪ ನಡೆಯಲಿದೆ.

ಕಲಾಪ ಬಳಿಕ ಮಾರ್ಚ್‌ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್‌ ಅನ್ನು ಮಂಡಿಸಲಿದ್ದಾರೆ.  ಇದಕ್ಕೂ ಮುನ್ನ ಆಡಳಿತಾರೂಢ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಬೆಟ್ಟು ಮಾಡಿ ತೀರಿಸಲು ವೈಫಲ್ಯಗಳ ಕುರಿತು ದೊಡ್ಡ ಪಟ್ಟಿಯನ್ನೇ ತಯಾರಿಸಿಕೊಂಡಿದೆ.

ಮುಖ್ಯವಾಗಿ ಕಾಂಗ್ರೆಸ್ ರಾಜ್ಯದಲ್ಲಿ ತಲೆದೋರಿರುವ ಹಿಜಾಬ್‌ ವಿವಾದ, ಹಿಂಸಾಚಾರ, ಕೇಸರಿ ಶಾಲು ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳ ಆಗಮನ, ಮೇಕೆದಾಟು ಪಾದಯಾತ್ರೆಗೆ ಅಡ್ಡಿಪಡಿಸಿದ ಬಗೆಗಿನ ವಿಚಾರಗಳು, ಸರ್ಕಾರದ ವಿರುದ್ಧ 40ಪರ್ಸೆಂಟ್‌ ಕಮಿಷನ್‌, ಅಂತರಾಜ್ಯ ಜಲವಿವಾದ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಸರ್ಕಾರದ ವೈಫಲ್ಯ ತೋರಿಸಲು ಸಜ್ಜಾಗಿವೆ.

ಜೆಡಿಎಸ್‌ ಕೂಡ ರಾಮನಗರ ನಗರಾಭಿವೃದ್ಧಯಿಲ್ಲಿ ಇಲಾಖೆಯಲ್ಲಿ  20ಕೋಟಿ ಅವ್ಯವಹಾರ, ಸಮವಸ್ತ್ರ ವಿಚಾರ ಸೇರಿದಂತೆ ಹಲವು ವಿಚಾರಘಳನ್ನು ಸರ್ಕಾರದ ಮುಂದಿಡಲಿವೆ. ಅಧಿವೇಶನದಲ್ಲಿ ಕೆಲವು ವಿಧೇಯಕಗಳನ್ನು ಮಂಡನೆ ಮಾಡಲು ಸರ್ಕಾರ ನಿರ್ಧರಿಸಿದೆ.

Share Post