Districts

ಹಿಜಾಬ್‌ ಧರಿಸದಿದ್ದರೆ ರೇಪ್‌ಗಳು ಹೆಚ್ಚಾಗುತ್ತವೆ: ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌

ಹುಬ್ಬಳ್ಳಿ: ಹಿಜಾಬ್ ಎಂದರೆ ಪರ್ದಾ ಎಂಬ ಅರ್ಥ ಬರುತ್ತದೆ. ವಯಸ್ಸಿಗೆ ಬಂದ ಹುಡುಗಿಯರನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಹಿಜಾಬ್, ಬುರ್ಕಾ ಧರಿಸಬೇಕಾಗುತ್ತಿದೆ. ಹಿಜಾಬ್ ಧರಿಸದಿದ್ದರೆ ರೇಪ್ ಗಳು ಹೆಚ್ಚಾಗುತ್ತವೆ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಆಹ್ಮದ್‌ ಖಾನ್‌ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಅತಿಹೆಚ್ಚು ಅತ್ಯಾಚಾರಗಳಾಗುತ್ತಿವೆ. ತಮ್ಮನ್ನು ರಕ್ಷಿಸಿಕೊಳ್ಳಲು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್‌ ಧರಿಸುತ್ತಾರೆ ಎಂಬರ್ಥದಲ್ಲಿ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳಿಕೆ ನೀಡಿದ್ದಾರೆ.

Share Post