ಬಾಡಿಗೆದಾರರ ಕಿರುಕುಳ; ಬೇಸತ್ತ ಮಹಿಳೆ ಆತ್ಮಹತ್ಯೆ, ಆಘಾತಕ್ಕೆ ತಾಯಿ ಸಾವು!
ಹಾಸನ; ಮನೆ ಬಾಡಿಗೆಗೆ ಪಡೆದವರು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು, ಮನೆ ಮಾಲೀಕಳಾದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಆಕೆಯ ತಾಯಿ ಆಘಾತದಿಂದ ಸಾವನ್ನಪ್ಪಿರುವ ದಾರುಭ ಗಟನೆ ಹಾಸನದಲ್ಲಿ ನಡೆದಿದೆ. ಲಲಿತಾ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ವಿಷಯ ಕೇಳಿ ಆಕೆಯ ತಾಯಿ ಲಕ್ಷಮ್ಮ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಲಲಿತಾ ಹಾಗೂ ಅವರ ಪತಿ ನಾಗರಾಜ ಅವರು ಹಾಸನ ನಗರದ ದಾಸರಕೊಪ್ಪಲು ಬಡಾವಣೆಯಲ್ಲಿ ವಾಸಕ್ಕೆ ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದರು. ನೆಲ ಅಂತಸ್ತಿನಲ್ಲಿ ವಾಸವಿದ್ದ ಇವರು, ಮೇಲಿನ ಮನೆಗಳನ್ನು ಬಾಡಿಗೆ ಹಾಗೂ ಭೋಗ್ಯ ನೀಡಿದ್ದರು. ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ ಹಾಗೂ ನಟರಾಜ ಎಂಬುವವರು ಎರಡು ವರ್ಷದ ಹಿಂದೆ ಮೊದಲ ಮಹಡಿಯಲ್ಲಿನ ಮನೆಯನ್ನು ಲೀಸ್‌ಗೆ ಪಡೆದಿದ್ದರು. ಮನೆಗೆ ಬಂದ ಒಂದು ವರ್ಷ ನಂತರ ವಿನಾಕಾರಣ ಬಾಡಿಗೆದಾರರಾದ ಸುಧಾರಾಣಿ ಹಾಗೂ ನಟರಾಜ್ ಅವರು ಮನೆಯ ಯಜಮಾನಿಗೆ ಕಿರುಕುಳ ನೀಡೋದಕ್ಕೆ ಶುರು ಮಾಡಿದ್ದರು. ವಿನಾಕಾರಣ ಜಗಳ ತೆಗೆಯುತ್ತಿದ್ದರಂತೆ.
ಅಲ್ಲದೆ ಜೂನ್ 16 ರಂದು ಸರ ಕಳವು ಮಾಡಿದ್ದಾರೆಂದು ಆರೋಪ ಮಾಡಿ ಹಲ್ಲೆಗೆ ಮುಂದಾಗಿದ್ದರಂತೆ. ಇದರಿಂದ ಅತಂಕಗೊಂಡ ಲಲಿತಾ ಅವರು ಮನೆ ಬಿಟ್ಟು ಹೋಗಿದ್ದರು. ಜೂನ್ 17ರ ಬೆಳಗ್ಗೆ ನಂಜದೇವರ ಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಲಲಿತಾ ಅವರು ಪತ್ತೆಯಾಗಿದ್ದರು. ಅವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವರು ಜೂನ್ 20ರಂದು ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳಿ ಲಲತಾ ಅವರ ತಾಯಿ ಲಕ್ಷ್ಮಮ್ಮ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.