Districts

ಹೊರಾಂಗಣದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌: ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ:  ಹೊಸ ವರ್ಷಾಚರಣೆಗೆ ಹೊರಾಂಗಣದಲ್ಲಿ ಗುಂಪು ಸೇರುವುದನ್ನು, ಹೊರಾಂಗಣದಲ್ಲಿ ಸಂಭ್ರಮಾಚರಣೆ ಮಾಡುವುದನ್ನು ರಾಜ್ಯ ಸರ್ಕಾರದ ನಿಷೇಧಿಸಿದೆ. ಇಲ್ಲಿ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಡಿಸೆಂಬರ್‌ 30 ರಿಂದ ಜನವರಿ 2ರ ವರೆಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಹೇಳಿದರು.

ಕ್ಲಬ್‌ಗಳಲ್ಲಿ ದೊಡ್ಡ ಮಟ್ಟದ ಪಾರ್ಟಿಗಳನ್ನು ಮಾಡಲು ಅವಕಾಶವಿಲ್ಲ. ಜನರು ಬಹಿರಂಗವಾಗಿ ಗುಂಪು ಸೇರುವಂತಿಲ್ಲ. ಬಾರ್‌, ಪಬ್‌ಗಳಲ್ಲಿ ಕೆಲಸ ಮಾಡುವವರು ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿರುವುದು ಕಡ್ಡಾಯ. ಜೊತೆಗೆ ಬಾರ್‌, ಪಬ್‌ಗಳಿಗೆ ಬರುವವರು ಎರಡೂ ಡೋಸ್‌ ವ್ಯಾಕ್ಸಿನ್‌ ಹಾಕಿಸಕೊಂಡಿರಬೇಕೆಂಬ ನಿಯಮವನ್ನು ಜಾರಿ ಮಾಡಲಾಗಿದೆ.

ಯಾರೂ ಕೂಡಾ ಹೊರಗಡೆ ಗುಂಪು ಸೇರಬಾರದು. ಹೊರ ಪ್ರದೇಶದಲ್ಲಿ ಸಂಭ್ರಮಾಚರಣೆಗೂ ಅವಕಾಶವಿಲ್ಲ. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಡಿಜೆ ಹಾಕಿಕೊಂಡು ಪಾರ್ಟಿಗಳನ್ನು ಮಾಡುವುದಕ್ಕೂ ಅವಕಾಶವಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಆದ್ರೆ ಚರ್ಚ್‌ಗಳಲ್ಲಿ ಕೊವಿಡ್‌ ನಿಯಮ ಪಾಲಿಸಿ, ಪ್ರಾರ್ಥನೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ನಿಯಮಾವಳಿ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ.

Share Post