BengaluruCinemaCrime

ಮಗ, ಸೊಸೆ ವಿರುದ್ಧ ಠಾಣೆ ಮೆಟ್ಟಿಲೇರಿದ ಹಿರಿಯ ನಟಿ ಶ್ಯಾಮಲಾದೇವಿ

ಬೆಂಗಳೂರು; ಮಗ ಹಾಗೂ ಸೊಸೆ ನನ್ನನ್ನು ಮನೆಯಿಂದ ಹೊರಹಾಕೋದಕ್ಕೆ ಪ್ರಯತ್ನ ಮಾಡ್ತಿದ್ದಾರೆ ಅಂತ ಹಿರಿಯ ನಟಿ ಶ್ಯಾಮಲಾದೇವಿ ಆರೋಪ ಮಾಡಿದ್ದಾರೆ. ಈ ಸಂಬಂಧ ಅವರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ಕೂಡಾ ದಾಖಲಿಸಿದ್ದಾರೆ. ಇದೇ ವೇಳೆ ಅವರು ತನ್ನ ಸ್ಥಿತಿಯನ್ನು ನೆನಪಿಸಿಕೊಂಡು ಕಣ್ಣೀರಾಕಿದ್ದಾರೆ.

ಶ್ಯಾಮಲಾದೇವಿಯವರು ಚಂದ್ರಲೇಔಟ್‌ನಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ಮಗನ ಜೊತೆ ವಾಸವಿದ್ದಾರೆ. ಆದ್ರೆ, ವಯಸ್ಸಾಗಿರುವ ಈ ಸಮಯದಲ್ಲಿ ಮಗ ನಿತಿನ್‌ ಹಾಗೂ ಸೊಸೆ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಶ್ಯಾಮಲಾ ದೇವಿ ಅಳಲು ತೋಡಿಕೊಂಡಿದ್ದಾರೆ. ಮಗ ನಿತಿನ್‌ ತಾಯಿ ಅನ್ನೋದನ್ನೂ ನೋಡದೇ ಶ್ಯಾಮಲಾ ದೇವಿ ಅವರ ಮೇಲೆ ಹಲ್ಲೆ ಮಾಡುತ್ತಿದ್ದಾನಂತೆ. ಸಿಕ್ಕ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಎಸೆಯುತ್ತಾನಂತೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನಂತೆ, ಜೊತೆಗೆ ಊಟ ಹಾಕದೆ ಹಿಂಸೆ ನೀಡುತ್ತಿದ್ದಾರೆ ಅಂತ ಶ್ಯಾಮಲಾದೇವಿ ಆರೋಪಿಸಿದ್ದಾರೆ.

ಈ ಹಿಂದೆ ಕೂಡಾ ಶ್ಯಾಮಲಾದೇವಿ ಅವರು ಮಗ ನಿತಿನ್ ಹಾಗೂ ಸೊಸೆ ವಿರುದ್ಧ ಹಿರಿಯ ನಾಗರಿಕರ ವೇದಿಕೆಗೆ ದೂರು ಕೊಟ್ಟಿದ್ದರು. ಆಗ ಮಗ ಮತ್ತು ಸೊಸೆ ತಪ್ಪೊಪ್ಪಿಕೊಂಡು ಮತ್ತೆ ತಾಯಿಯೊಂದಿಗೆ ವಾಸಿಸುತ್ತಿದ್ದರು.

Share Post