ರಷ್ಯಾ-ಉಕ್ರೇನ್ ನಡುವಿನ ಸಮರದ ಬಗ್ಗೆ ಹೆಚ್.ಡಿ.ದೇವೇಗೌಡ ಮಾತು
ಚಿಕ್ಕಮಗಳೂರು: ಶಾರದಾಂಬೆಯ ದರ್ಶನ ಪಡೆಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ರಷ್ಯಾ ಹಾಗು ಉಕ್ರೇನ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಇದ್ದಕಿದ್ದಂತೆ 4 ದಿನದ ಹಿಂದೆ ಯುದ್ದ ಮಾಡೋದಾಗಿ ರಷ್ಯಾದ ಅಧ್ಯಕ್ಷರು ಹೇಳಿದ್ರು, ಆಗಲೇ ಉಕ್ರೇನ್ ಮೇಲೆ ಯುದ್ದ ಶುರುಮಾಡಿದ್ದಾರೆ. ಪ್ರಪಂಚದ ಅನೇಕ ರಾಷ್ಟ್ರಗಳು ಯುದ್ಧ ಬೇಡವೆಂದು ಹೇಳುತ್ತಿದೆ ಆದರೆ ರಷ್ಯಾ ಮಾತ್ರ ನಾನು ನಿಲ್ಲಿಸುವುದಿಲ್ಲ ಅಂತ ಹೇಳುತ್ತಿದೆ.
ಯುದ್ಧ ಶಮನವಾಗಬೇಕೆಂದು ನಮ್ಮ ಪ್ರಧಾನಮಂತ್ರಿಗಳು ಪ್ರಯತ್ನ ಮಾಡುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೋದಿಯವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಮಾತುಕತೆ ಮೂಲಕ ಏನಾದ್ರೂ ಸಾಧ್ಯಾಗಬಹುದೇನೋ…. ನೋಡೋಣ ಎಂದು ಹೆಚ್‌ಡಿಡಿ ಭರವಸೆ ಮಾತುಗಳನ್ನಾಡಿದ್ರು.