CrimeDistricts

ಕುಷ್ಟರೋಗ ನಿಯಂತ್ರಣಾಧಿಕಾರಿ ರೂಪಾ ಸಾವಿಗೆ ಟ್ವಿಸ್ಟ್‌

ಚಿತ್ರದುರ್ಗ; ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ರೂಪಾ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಶೆಲ್ಫ್‌ಗೆ ತಲೆ ಬಡಿದು ತೀವ್ರ ರಕ್ತಸ್ರಾವವಾಗಿ ರೂಪಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಮರಣೋತ್ತರ ಪರೀಕ್ಷೆ ವೇಳೆ ರೂಪಾಯಿ ತಲೆಯಲ್ಲಿ ರಿವಾಲ್ವಾರ್‌ ಗುಂಡು ಪತ್ತೆಯಾಗಿದೆ. ಹೀಗಾಗಿ ಇದು ಕೊಲೆ ಅಥವಾ ಆತ್ನಹತ್ಯೆ ಎಂದು ಶಂಕಿಸಲಾಗಿದೆ. ರೂಪಾ ಪೋಷಕರು ಇದೊಂದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ. 

ರೂಪಾ ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತಿ ರವಿ ಮೂಳೆರೋಗ ತಜ್ಞರಾಗಿದ್ದಾರೆ. ಅವರು ವಿಪಿ ಬಡಾವಣೆಯಲ್ಲಿ ಸ್ವಂತ ಕ್ಲಿನಿಕ್‌ ನಡೆಸುತ್ತಿದ್ದಾರೆ. ಆದ್ರೆ ಅದೇನಾಯ್ತೋ ಏನೋ ಇತ್ತೀಚೆಗೆ ರೂಪಾ ಅವರು ಮನೆಯಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಪತಿ ರವಿ ಇದನ್ನು ಆಕಸ್ಮಿಕ ಸಾವು ಎಂದೇ ಬಿಂಬಿಸಿದ್ದರು. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ತಲೆಯಲ್ಲಿ ಗುಂಡು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

Share Post