ಚಾಕೊಲೇಟ್ ಗಂಟಲಲ್ಲಿ ಸಿಕ್ಕಿದ್ದರಿಂದ ಉಸಿರುಗಟ್ಟಿ ಬಾಲಕಿ ಸಾವು
ಉಡುಪಿ; ಚಾಕೊಲೇಟ್ ಗಂಟಲಲ್ಲಿ ಸಿಲುಕಿ ಆರು ವರ್ಷ ಶಾಲಾ ಬಾಲಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಬಳವಾಡಿ ಎಂಬಲ್ಲಿ ನಡೆದಿದೆ. ಉಪ್ಪುಂದ ಆಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮನ್ವಿ ಮೃತ ಬಾಲಕಿ.
ಬಾಲಕಿ ಬಸ್‌ಗಾಗಿ ಕಾಯುತ್ತಿದ್ದಾಗ ಚಾಕೊಲೇಟ್ ತಿಂದಿದ್ದಾಳೆ. ಅದು ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಉಸಿರುಗಟ್ಟಿದೆ. ಇದ್ರಿಂದಾಗಿ ಸಮನ್ವಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.