300ರ ಗಡಿಯಲ್ಲಿ ಬೆಳ್ಳುಳ್ಳಿ ಬೆಲೆ; ಗೋಡೌನ್ ಶಟರ್ ಮುರಿದು 150 ಚೀಲ ಕಳವು!
ಚಿತ್ರದುರ್ಗ; ಕೆಲ ದಿನಗಳಿಂದ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಬೆಳ್ಳುಳ್ಳಿ 280 ರೂಪಾಯಿ ಮುಟ್ಟಿದೆ. ಹೀಗಾಗಿ ಕಳ್ಳರು ಬೆಳ್ಳುಳ್ಳಿ ಬೆನ್ನುಬಿದ್ದಿದ್ದಾರೆ. ಬೆಲೆ ಗಗನಕ್ಕೇರಿರುವುದರಿಂದ ಬೆಳ್ಳುಳ್ಳಿ ಕಳ್ಳತನ ಹೆಚ್ಚಾಗುತ್ತಿದೆ. ಚಿತ್ರದುರ್ಗ ತಾಲೂಕಿನ ದಂಡಿನಕುರುಬರ ಹಟ್ಟಿ ಗ್ರಾಮದ ಗೋಡೌನ್ನಲ್ಲಿ ಬೆಳ್ಳುಳ್ಳಿ ಸಂಗ್ರಹಿಸಿಡಲಾಗಿದೆ. ಅದರ ಶಟರ್ ಮುರಿದಿರುವ ಕಳ್ಳರು, 150 ಚೀಲಗಳಷ್ಟು ಬೆಳ್ಳುಳ್ಳಿಯನ್ನು ಕದ್ದಿದ್ದಾರೆ.
ಮೊದಲಿಗೆ ಗೋಡೌನ್ನ ಕಿಟಕಿಯ ಸರಳು ಮುರಿದು ಗೋಡೌನ್ ಪ್ರವೇಶಿಸಿದ್ದಾರೆ. ಅನಂತರ ಗೋಡೌನ್ ಶಟರ್ ಮುರಿದು ಅಲ್ಲಿಂದ ಬೆಳ್ಳುಳ್ಳಿ ಚೀಲಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಇದರ ಮೌಲ್ಯ 6 ಲಕ್ಷ ರೂಪಾಯಿ ಎಂದು ಬಂದಿದೆ. ಮಧ್ಯಪ್ರದೇಶದಿಂದ 1 ಸಾವಿರ ಚೀಲ ಬೆಳ್ಳುಳ್ಳಿಯನ್ನು ತಂದು ಬಸವ ಕಿರಣ ಎಂಬುವವರು ಇಲ್ಲಿ ದಾಸ್ತಾನು ಮಾಡಿದ್ದರು ಎಂದು ತಿಳಿದುಬಂದಿದೆ.