ನಾಳೆಯಿಂದ ಹತ್ತು ದಿನ ಹಂಪಿ ಸ್ಮಾರಕಗಳ ವೀಕ್ಷಣೆ ಉಚಿತ
ಹೊಸಪೇಟೆ ; ನಾವು ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ.. ಇದರ ಅಂಗವಾಗಿ ಈಗಾಗಲೇ ಕೇಂದ್ರ ಸರ್ಕಾರ ಉಚಿತವಾಗಿ ಕೋವಿಡ್ ಬೂಸ್ಟರ್ ನೀಡುತ್ತಿದೆ. ಇದೀಗ ಸಂರಕ್ಷಿತ ಸ್ಮಾರಕಗಳು, ವಸ್ತುಗಳ ಸಂಗ್ರಹಾಲಯಗಳ ವೀಕ್ಷಣೆಗೆ ಕೂಡಾ ಉಚಿತ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆ. 5ರಿಂದ 15ರ ವರೆಗೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಉಚಿತ ಪ್ರವೇಶ ಇರುತ್ತದೆ.
ಹಂಪಿ ಸೇರಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ದೇಶದ ಎಲ್ಲ ಸಂರಕ್ಷಿತ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳ ವೀಕ್ಷಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಹೀಗಾಗಿ ಸಂರಕ್ಷಿತ ತಾಣಗಳನ್ನು ನೋಡಬಯಸುವವರು ಉಚಿತವಾಗಿ ಅವುಗಳ ವೀಕ್ಷಣೆ ಮಾಡಬಹುದು.