Districts

ಬಾಗಲಕೋಟೆಯಲ್ಲಿ ಮಳೆಯಿಂದಾಗಿ ಅವಾಂತರ; ಯುವಕ ರಕ್ಷಣೆ

ಬಾಗಲಕೋಟೆ; ಕಳೆದ ಎರಡು ದಿನಗಳಿಂದ ವರುಣನ‌ ಅರ್ಭಟ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಾದಾಮಿ ತಾಲೂಕಿನಲ್ಲಿ ಸಹ ಸಾಕಷ್ಟು ಮಳೆಯಾದ ಪರಿಣಾಮ ಮನೆ ಹಾಗೂ ಜಮೀನುಗಳಿಗೆ ನೀರು‌ ನುಗ್ಗಿ ಸ್ಥಳೀಯರು ಪರದಾಡುವಂತಾಗಿದೆ.

ಭಾರಿ ಮಳೆಯಿಂದಾಗಿ ಯಂಕಂಚಿ, ಮಣಿನಾಗರ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾದಾಮಿ-ಕೆರೂರು ಸಂಚಾರ ಬಂದ್ ಆಗಿದೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ಯುವಕರು ಹುಚ್ಚು ಸಾಹಸ ಮಾಡುತ್ತಿದ್ದಾರೆ. ಎಚ್ಚರಿಕೆ ಕೊಟ್ಟರೂ ಯುವಕರು ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಹಳ್ಳ ತುಂಬಿ ರಸ್ತೆ ಮಾರ್ಗದ ಸೇತುವೆ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರೂ ಸ್ಥಳೀಯರು ನಡೆದುಕೊಂಡು ಬರುವುದು, ಬೈಕ್ ಚಲಾಯಿಸುವುದು ಮಾಡುತ್ತಿದ್ದಾರೆ. ಈ ವೇಳೆ ಬೇಡ ಎಂದ್ರೂ ಯುವಕನೊಬ್ಬ ಬೈಕ್​ನಲ್ಲಿ ಹೋಗಿ ಸೇತುವೆ ಮಧ್ಯೆ ಸಿಲುಕಿಕೊಂಡು ಮುಂದಕ್ಕೆ ಹೋಗಲಾಗದೇ ಪರದಾಡಿದ ಘಟನೆ ನಡೆಯಿತು. ನಂತರ ದಡದಲ್ಲಿದ್ದ ಇಬ್ಬರು ಯುವಕರು ಓಡಿ ಹೋಗಿ ಬೈಕ್ ಎಳೆದುಕೊಂಡು ಬಂದು ಯುವಕನನ್ನು ರಕ್ಷಿಸಿದ ಘಟನೆ ನಡೆದಿದೆ.

Share Post