DistrictsHealth

ಹಾವು ಕಚ್ಚಿ ನಾಲ್ಕನೇ ತರಗತಿ ಬಾಲಕಿ ಸಾವು!

ಕಲಬುರಗಿ; ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಫಜಲಪುರ ತಾಲ್ಲೂಕಿನ ಬಿಲ್ವಾಡ್‌ (ಬಿ) ಗ್ರಾಮದ ಸೋನಿಕಾ ಎಂಬಾಕೆಯೇ ಸಾವನ್ನಪ್ಪಿರುವ ಬಾಲಕಿ.

ಹತ್ತು ವರ್ಷದ ಸೋನಿಕಾ ಪಾಟೀಲ್‌ ಬಿಲ್ವಾಡ್‌ (ಬಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.  ನಿನ್ನೆ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಹಾವು ಕಡಿದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಸೋನಿಕಾ ಸಾವನ್ನಪ್ಪಿದ್ದಾಳೆ.

 

Share Post