CinemaHealth

ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತಕ್ಕೆ ಬಲಿ

ಬೆಂಗಳೂರು; ಕನ್ನಡ ಹಾಗೂ ಹಲವು ಭಾಷೆಗಳ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿ ಸಾಕಷ್ಟು ಹೆಸರು ಮಾಡಿದ್ದ ಜಾಲಿ ಬಾಸ್ಟಿನ್‌ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪ್ರೇಮಲೋಕ, ಪುಟ್ನಂಜ, ಶಾಂತಿ ಕ್ರಾಂತಿ ಸೇರಿದಂತೆ ಹಲವಾರು ಹಿಟ್‌ ಚಿತ್ರಗಳಿಗೆ ಇವರು ಸಾಹಸ ನಿರ್ದೇಶಕರಾಗಿದ್ದರು. ಜಾಲಿ ಬಾಸ್ಟಿನ್‌ ಅವರಿಗೆ 57 ವರ್ಷ ವಯಸ್ಸಾಗಿತ್ತು.

ಜಾಲಿ ಬಾಸ್ಟಿನ್‌ ಅವರು ಕೇರಳದ ಅಲೆಪ್ಪೆಯಲ್ಲಿ ಜನಿಸಿದರು.  ಆದ್ರೆ ಬೆಂಗಳೂರಿನಲ್ಲೇ ಬೆಳೆದರು, ಶಿಕ್ಷಣ ಕೂಡಾ ಬೆಂಗಳೂರಿನಲ್ಲೇ ಆಯಿತು. ಮೊದಲಿಗೆ ಬೈಕ್‌ ಮೆಕಾನಿಕ್‌ ಆಗಿದ್ದ ಅವರು, ಸ್ಟಂಟ್‌ಮ್ಯಾನ್‌ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಪ್ರೇಮಲೋಕ ಸಿನಿಮಾದಲ್ಲಿ ರವಿಚಂದ್ರನ್‌ಗೆ ಡ್ಯೂಪ್‌ ಆಗಿ ಕೆಲಸ ಮಾಡಿದ್ದರು.

900ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಭಲೇ ಚತುರ ಸಿನಿಮಾದ ಚಿತ್ರೀಕರಣದ ವೇಲೆರ ಬಾಂಬ್‌ ಬ್ಲಾಸ್ಟ್‌ ದೃಶ್ಯದ ವೇಳೆ ಜಾಲಿ ಬಾಸ್ಟಿನ್‌ ಅವರ ದೇಹಕ್ಕೆ ಸಾಕಷ್ಟು ಗಾಯಗಳಾಗಿದ್ದವು. ಪುಟ್ನಂಜ ಚಿತ್ರದ ಶೂಟಿಂಗ್‌ ಸಂದರ್ಭದಲ್ಲೂ ಬೈಕ್‌ನಿಂದ ಬಿದ್ದು ಕಾಲು ಹಾಗೂ ಮುಖಕ್ಕೆ ಗಾಯಗಳಾಗಿದ್ದವು.

ತಮಿಳು, ಮಲಯಾಳಂ ಚಿತ್ರಗಳಲ್ಲೂ ಇವರು ಸಾಹಸ ನಿರ್ದೇಶನ ಮಾಡಿದ್ದರು. ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದರು.

Share Post