CrimeDistricts

ತಲೆ ಕತ್ತರಿಸಿದ ಸ್ಥಿತಿಯಲ್ಲಿ ಹುಡುಗಿಯ ಶವ ಪತ್ತೆ; ಸ್ಮೈಲ್‌ T-Shirt ತೊಟ್ಟ ಯುವತಿ ಯಾರು..?

ಬಾಗಲಕೋಟೆ; ಕೊಡಗಿನಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಯ ರುಂಡ ಕಡಿದು ಪರಾರಿಯಾಗಿದ್ದ.. ಈಗ ಅಂತಹದ್ದೇ ಒಂದು ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.. ಆದ್ರೆ ಇಲ್ಲಿ ಯಾಕೆ ಕೊಲೆ ನಡೆದಿದೆಯೋ ಗೊತ್ತಿಲ್ಲ.. ಆದ್ರೆ ಯುವತಿಯ ಶವವೊಂದು ರುಂಡ ಕಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.. ದೇಹ ಒಂದು ಕಡೆ ಹಾಗೂ ರುಂಡ ಒಂದು ಕಡೆ ಬಿದ್ದಿದ್ದು, ಇದನ್ನು ನೋಡಿ ಜನರು ಬೆಚ್ಚಿಬಿದ್ದಿದದಾರೆ..

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹಳೇ ತಳ್ಳಿಕೇರಿ ಸಮೀಪ ಈ ಘಟನೆ ನಡೆದಿದೆ.. 20-25 ನಡುವಿನ  ವಯಸ್ಸಿನ ಯುವತಿ ಶವ ಇದಾಗಿದ್ದು, ಈಕೆ ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಯುವತಿ ಧರಿಸಿದ್ದ ಟಿ ಶರ್ಟ್‌ ಮೇಲೆ ಸ್ಮೈಲ್‌ ಎಂದು ಬರೆದಿದೆ.. ಪಿಂಕ್‌ ಬಣ್ಣದ ಉದ್ದ ತೋಳಿನ ಟಿ ಶರ್ಟ್‌ ಇದಾಗಿದೆ.. ಇದರ ಜೊತೆ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾಳೆ..

ಯುವತಿಯ ಗುರುತು ಪತ್ತೆಯಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ.. ಎಲ್ಲಾ ಪೊಲೀಸ್‌ ಠಾಣೆಗಳಿಗೂ ಫೋಟೋ ರವಾನಿಸಲಾಗಿದೆ.. ಇನ್ನೊಂದೆಡೆ ಈ ಕೊಲೆ ಯಾಕೆ ನಡೆಯಿತು..,? ಆರೋಪಿಗಳು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.. ಬೀಳಗಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ..

 

Share Post