ದೇವಾಲಯದ ಪ್ರಸಾದದಲ್ಲಿ ಫುಡ್ ಪಾಯ್ಸನ್:ತಿಂದವರು ಆಸ್ಪತ್ರೆಗೆ ದಾಖಲು
ಕೋಲಾರ: ವಿಷ ಪ್ರಾಸನ ಎಲ್ಲಿ, ಹೇಗೆ ನಡೆಯುತ್ತದೆ ಎಂದು ಯಾರಿಗೂ ಅರಿವಿರುವುದಿಲ್ಲ, ಕೆಲವರು ದ್ವೇಷ ಅಸೂಯೆಯಿಂದ ವಿಷಪ್ರಯೋಗ ಮಾಡುವ ಹುನ್ನಾರ ನಡೆದಿರುತ್ತದೆ. ಈ ಹಿಂದೆ ಚಾಮರಾಜನಗರದಲ್ಲಿ ದೇವಾಲಯದಲ್ಲಿ ವಿಷಪ್ರಾಸನ ನಡೆದ ಅನೇಕ ಮಂದಿ ಜೀವತೆತ್ತಿದ್ರು ಈಗ ಅಂಥೆದ್ದೇ ಘಟನೆ ಕೋಲಾರದಲ್ಲಿ ನಡೆದಿದೆ.
ಹೌದು ದೇವಸ್ಥಾನದ ಪ್ರಸಾದ ಸೇವಿಸಿ ಹತ್ತೊಂಭತ್ತು ಮಕ್ಕಳು ಸೇರಿದಂತೆ ಇಪ್ಪತ್ತೆಂಟಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ಹೊಸ ವರ್ಷದ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ-ಪುನಸ್ಕಾರ ಏರ್ಪಡಿಸಿದ್ರು. ಈ ವೇಳೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ತಯಾರಿಸಿ ಹಂಚಿದ್ದಾರೆ. ಚಿತ್ರಾನ್ನ, ಕೇಸರಿಬಾತ್ ತಿಂದ ಮಕ್ಕಳು, ಭಕ್ತರಿಗೆ ಇದ್ದಕ್ಕಿದ್ದಂತೆ ವಾಂತಿ ಶುರುವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಗ್ರಾಮಸ್ಥರು ಆಂಬುಲೆನ್ಸ್‌ನಲ್ಲಿ ಅಸವಸ್ಥರುನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ವಿಜಯ ಹಾಗೂ ಟಿಹೆಚ್‌ಒ ಜಗದೀಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ. ಸದ್ಯ ಪ್ರಸಾದ ತಯಾರಿಸಿರುವ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.