ಯುವತಿ ಅನುಮಾನಾಸ್ಪದ ಸಾವು: ತನಿಖೆಗೆ ಪೋಷಕರ ಒತ್ತಾಯ
ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಮನೆಯಲ್ಲಿ ಹತ್ತೊಂಭತ್ತು ವರ್ಷದ ಮನೆಕೆಲಸದ ಯುವತಿಯೊನ್ನಳ ನೇಣುಬಿಗಿದುಕೊಂಡು ಆತ್ಮಹತುಎ ಮಾಡಿಕೊಂಡಿರುವ ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ. ಕವಿತಾ ಮೃತ ದುರ್ದೈವಿ. ಆರು ತಿಂಗಳಿಂದ ಟೆಕ್ಕಿ ವಿವೇಕ್ ಅವರ ಮನೆಯಲ್ಲಿ ಕವಿತಾ ಕೆಲಸ ಮಾಡುತ್ತಿದ್ದಾಗಿ ಮಾಹಿತಿಯಿದೆ.
ಮೂಲತಃ ಜಕ್ಕಸಂದ್ರ ನಿವಾಸಿಯಾಗಿರುವ ಕವಿತಾಗೆ ತಮ್ಮ ವಿವೇಕ್ ಅವರ ಫ್ಲಾಟ್ನಲ್ಲಿ ಒಂದು ಕೊಠಡಿಯಲ್ಲಿ ಕವಿತಾ ಉಳಿದುಕೊಂಡಿದ್ರಂತೆ. ಬೆಳಗ್ಗೆ ತುಂಬಾ ಹೊತ್ತಾದರೂ ಆಚೆ ಬಾರದಿರುವುದನ್ನು ಕಂಡು ವಿವೇಕ್ ಹೋಗಿ ಬಾಗಿಲು ಬಡಿದಿದ್ದಾರೆ. ಆದ್ರೆ ಯಾವುದಕ್ಕೂ ಉತ್ತರಿಸಿದಿದ್ದಕ್ಕೆ ಕೊಠಡಿ ಬಾಗಿಲು ಹೊಡೆದು ನೋಡಿದಾಗ ಸ್ನಾನದ ಕೋಣೆಯಲ್ಲಿ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪ್ತತೆಯಾಗಿದ್ದಾಳೆ. ಕೂಡಲೇ ವಿವೇಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕವಿತಾ ಪೋಷಕರು ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ತನ್ನ ಮೇಲಿನ ದೌರ್ಜನ್ಯ ಸಹಿಸಲಾರದೆ ಈ ನಿರ್ಧಾರ ಕೈಗೊಂಡಿದ್ದಾಳೆ. ಈ ಬಗ್ಗೆ ಹೆಚ್ಚಇನ ತನಿಖೆ ಕೈಗೊಳ್ಳಬೇಕು. ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕವಿತಾ ಮೌಖಿಕವಾಗಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಎಫ್ಎಸ್ಎಲ್ ವರದಿ ಬಳಿಕ ಸಾವಿನ ಬಗ್ಗೆ ಖಚಿತ ಕಾರಣ ತಿಳಿಯಲಿದೆ. ಘಟನೆ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.