CrimeDistrictsHealth

ಹೆಣ್ಣು ಭ್ರೂಣ ಹತ್ಯೆ ಪ್ರಕರಣ; 5 ತಿಂಗಳ ಹಳೆಯ ನೋಟಿಸ್‌ ಅಂಟಿಸಿದ್ದೇಕೆ..?

ಮೈಸೂರು; ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಲಾಗಿದೆ. ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಮೈಸೂರಿನ ರಾಜ್‌ಕುಮಾರ್ ರಸ್ತೆಯ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಇದುವರೆಗೂ 900 ಗರ್ಭಪಾತ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಆಸ್ಪತ್ರೆಯಲ್ಲಿ ನಡೆದ ಭ್ರೂಣ ತಪಾಸಣೆ ಬಗ್ಗೆ ಮಾಹಿತಿ ನೀಡುವಂತೆ ಆಸ್ಪತ್ರೆಗೆ ನೋಟಿಸ್ ಅಂಟಿಸಲಾಗಿದೆ.

ರಾತ್ರೋ ರಾತ್ರಿ ಆಸ್ಪತ್ರೆಯ ಗೋಡೆಗೆ ಐದು ತಿಂಗಳ ಹಳೆಯ ನೋಟಿಸ್ ಅಂಟಿಸಲಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಮೊನ್ನೆ ಇಲ್ಲದ ನೋಟಿಸ್ ಇಂದು ದಿಢೀರ್ ಮಾತಾ ಆಸ್ಪತ್ರೆ ಗೋಡೆ ಮೇಲೆ ಪ್ರತ್ಯಕ್ಷವಾಗಿದ್ದ, ಯಾಕೆ ಹೀಗೆ ಮಾಡಲಾಗಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಐದು ತಿಂಗಳು ಹಳೆಯ 22-06-2023ರ ನೋಟಿಸ್ ಅಂಟಿಸಲಾಗಿದೆ.

ಆಸ್ಪತ್ರೆ ಮೇಲೆ ಭ್ರೂಣ ಹತ್ಯೆಯ ಮೌಖಿಕ ದೂರುಗಳ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಆಸ್ಪತ್ರೆಯ ವಿಡಿಯೋ ಮಾಡಿಕೊಂಡು ತೆರಳಿದ್ದಾರೆ.

Share Post