CrimeNational

ಆ್ಯಪ್‌ಗಳ ಮೂಲಕ ಸಾಲ ನೀಡಿ ಸುಲಿಗೆ; ಚೀನಾದ ಲಿಯು ಯೀಗಾಗಿ ಲುಕ್‌ಔಟ್‌ ನೋಟಿಸ್‌

ಭುವನೇಶ್ವರ; ಮೊಬೈಲ್‌ ಆ್ಯಪ್‌ಗಳ ಮೂಲಕ ಸುಲಭವಾಗಿ ಸಾಲ ಕೊಟ್ಟು ನಂತರ ಗ್ರಾಹಕರಿಂದ ಸುಲಿಗೆ ಮಾಡುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಚೀನಾದ ನಾಗರಿಕ ಲಿಯು ಯೀ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ. ತ್ವರಿತಗತಿಯಲ್ಲಿ ಸಾಲ ನೀಡಿ, ಫೋನ್‌ನಲ್ಲಿರುವ ಕಾಂಟ್ಯಾಕ್ಟ್‌ ಲಿಸ್ಟ್‌ ಕದ್ದು, ಗ್ರಾಹಕರಿಗೆ ಬೆದರಿಕೆ ಹಾಕುವ ಪ್ರಕರಣ ಜಾಸ್ತಿಯಾಗುತ್ತಿವೆ. ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಆರೋಪಿಗಳು, ತೆಗೆದುಕೊಂಡು ಸಾಲ ವಾಪಸ್‌ ನೀಡಿದರೂ ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಸಾಲದೆಂಬಂತೆ ನಿಮ್ಮ ಫೋಟೋಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡೋದಾಗಿ ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಬಂದ ದೂರಿನನ್ವಯ ಪ್ರಮುಖ ಆರೋಪಿಗಾಗಿ ಲುಕ್‌ ಔಟ್‌ ನೋಡಿಸ್‌ ಜಾರಿ ಮಾಡಲಾಗಿದೆ.

ವಾಣಿಜ್ಯ ಅಪರಾಧಗಳ ವಿಭಾಗ (ಇಒಡ್ಲ್ಯು)ದ ಆಗ್ರಹದ ಮೇರೆಗೆ ಬ್ಯೂರೋ ಆಫ್‌ ಇಮಿಗ್ರೇಷನ್‌ (ಬಿಒಐ) ಈ ಆದೇಶ ಹೊರಡಿಸಿದೆ. ಏಪ್ರಿಲ್‌ 21ರಂದು ಇಒಡ್ಲ್ಯು ಪೊಲೀಸ್‌ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ ಲಿಯು ಯೀ ಪ್ರಮುಖ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ವಿವಿಧ ರಾಜ್ಯಗಳ ಪೊಲೀಸರ ನೆರವಿನಿಂದ ಈಗಾಗಲೇ ಐವರು ಲಿಯು ಯೀ ಸಹಚರರನ್ನು ಇಒಡ್ಲ್ಯು ಬಂಧಿಸಿದೆ. ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿಯಲ್ಲಿ ದಾಳಿ ನಡೆಸಿದ ಇಒಡ್ಲ್ಯು ಸುಮಾರು 6.57 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಶಪಡಿಸಿಕೊಂಡಿದೆ.

Share Post