ಸ್ನಾನ ಮಾಡುವಾಗ ವಿಡಿಯೋ ಮಾಡ್ಕೊಂಡ್ರು; ನಂತರ ಆ ತಂದೆ-ಮಗ ಮಾಡಿದ್ದೇನು..?
ಮೈಸೂರು; ಪಕ್ಕದ ಮನೆಯ ಮಹಿಳೆಯ ಸ್ನಾನ ಮಾಡುವಾಗ ಕಳ್ಳತನದಿಂದ ಅದನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ತಂದೆ-ಮಗನ ವಿರುದ್ಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹೆಬ್ಬಾಳ ಬಡಾವಣೆಯ ಪ್ರಮೋದ್ ಹಾಗೂ ಆತನ ತಂದೆ ಗೋವಿಂದರಾಜು ಎಂಬುವವರೇ ಮಹಿಳೆಗೆ ಬ್ಲ್ಯಾಕ್‌ಮೇಳ್ ಮಾಡಿದವರು. ಇವರ ಪಕ್ಕದ ಮನೆಯಲ್ಲಿ ಕುಟುಂಬವೊಂದು ವಾಸಿಸುತ್ತಿದೆ. ಮಹಿಳೆಯ ಗಂಡ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಂದೆ – ಮಗ ಗುಪ್ತವಾಗಿ ಆಕೆಯ ಸ್ನಾನದ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಕರಿಸಿದ್ದಾರೆ. ಬಳಿಕ ಕಳೆದ ಎರಡು ವರ್ಷಗಳಿಂದ ವಿಡಿಯೋ ತೋರಿಸಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.
ಹಣ ಕೊಡದಿದ್ದರೆ ಈ ವಿಡಿಯೋವನ್ನ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದರು. ಜೊತೆಗೆ ನನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಹೀಗಾಗಿ ವಿಧಿಯಿಲ್ಲದೆ ಪೊಲೀಸರಿಗೆ ದೂರು ನೀಡಿರುವುದಾಗಿ ಮಹಿಳೆ ಹೇಳಿದ್ದಾರೆ.