DistrictsPolitics

ಹೆಲಿಕಾಪ್ಟರ್‌ನಲ್ಲಿ ಬಂದು ಮತದಾನ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿ

ಹಾಸನ; ಮಾಜಿ ಪ್ರಧಾನಿ ದೇವೇಗೌಡರು ಪಡುವಲಹಿಪ್ಪೆ ಗ್ರಾಮದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪತ್ನಿ ಚನ್ನಮ್ಮ ಜೊತೆ ಬಂದು ದೇವೇಗೌಡರು ಮತದಾನ ಮಾಡಿದರು. ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಂದು ಮತ ಚಲಾವಣೆ ಮಾಡಿ, ಮತದಾನದ ಮಹತ್ವವನ್ನು ತಿಳಿಸಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ದೇವೇಗೌಡರ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲಾಯಿತು. ನಂತರ ಅವರು ಕಾರಿನ್ಲಲಿ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿದರು. ಅಲ್ಲಿನ ಮತಗಟ್ಟೆ 251ರಲ್ಲಿ ಮತದಾನ ಮಾಡಿದರು.

Share Post