CrimeDistricts

ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕ ಅತ್ಯಾಚಾರ!

ಶಿವಮೊಗ್ಗ; ಶಿಕ್ಷಕ ಎಂದರೆ ದೇವರಿಗೆ ಸಮಾನ.. ಆದ್ರೆ ಈ ದೇವರ ಸ್ಥಾನದಲ್ಲಿರುವ ಶಿಕ್ಷಕರೇ ತಪ್ಪು ಮಾಡಿದರೆ ಕಾಪಾಡುವವರೇ ಯಾರು ಎಂಬ ಪ್ರಶ್ನೆ ಎದುರಾಗುತ್ತೆ.. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ಭಕ್ಷಕರಾಗುತ್ತಿದ್ದಾರೆ.. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ.. ಇದಕ್ಕೆ ಉದಾಹರಣೆ ಶಿವಮೊಗ್ಗದ ಉಪನ್ಯಾಸಕ.. ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜೊಂದರ ಉಪನ್ಯಾಸಕ ಮದುವೆಯಾಗುವುದಾಗಿ ನಂಬಿಸಿ ತನ್ನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದಾನೆಂಬ ಆರೋಪ ಕೇಳಿಬಂದಿದೆ..

ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯ ಪರವಾಗಿ ಬರುತ್ತಾ ತೀರ್ಪು..?

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಖಾಸಗಿ ಕಾಲೇಜು ಉಪನ್ಯಾಸಕ ಪುನೀತ್‌ ವಿರುದ್ಧ ಇಂತಹ ಆರೋಪ ಕೇಳಿಬಂದಿದೆ.. ಸಂತ್ರಸ್ತ ವಿದ್ಯಾರ್ಥಿನಿ ಶಿವಮೊಗ್ಗ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.. ತನಗೆ ಮದುವೆಯಾಗುವುದಾಗಿ ಉಪನ್ಯಾಸಕ ಪುನೀತ್‌ ನಂಬಿಸಿದ್ದ.. ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ.. ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಈಗ ಮದುವೆಗೆ ಒಲ್ಲೆ ಎನ್ನುತ್ತಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ..

ಇದನ್ನೂ ಓದಿ; ಅಪ್ರಾಪ್ತಳ ಖಾಸಗಿ ಅಂಗಕ್ಕೆ ಬಿಸಿ ನೀರು ಸುರಿದ ಬಾಲಕರು!

Share Post