Districts

ಆನೆ ದಾಳಿಗೆ ಅರಣ್ಯ ಇಲಾಖೆ ಜೀಪ್‌ ಉಡೀಸ್

ಚಾಮರಾಜನಗರ: ಮೈಸೂರು, ಚಾಮರಾಜನಗರ, ರಾಮನಗರ, ಆನೇಕಲ್‌, ಹಾಸನ, ಈ ಭಾಗಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಕಾಡಂಚಿನ ಭಾಗಗಳಾದ್ದರಿಂದ ಆಹಾರ ಹರಸಿ ನಾಡಿಗೆ ಬರುವ ಆನೆಗಳ ಜನರಿಗೆ ಇನ್ನಿಲ್ಲದ ತೊಂದರೆಗಳನ್ನು ನೀಡುತ್ತವೆ. ಅರಣ್ಯಾಧಿಕಾರಿಗಳಿಗಂತೂ ಆನೆಗಳನ್ನು ಕಾಡಿಗಟ್ಟುವ ಕೆಲಸ ತಲೆನೋವಾಗಿ ಪರಿಣಮಿಸಿದೆ. ಕೆಲವೊಮ್ಮೆ ಆನೆ ಪ್ರತಿದಾಳಿಗೆ ಜನ, ಅರಣ್ಯಾಧಿಕಾರಿಗಳು ಪ್ರಾಣ ಕಳೆದುಕೊಂಡಿರುವ ಉದಾಹರಣಗಳೂ ಇವೆ. ಇಂದು ಕೂಡ ರೈತನ ಜಮೀನಿಗೆ ನುಗ್ಗಿದ ಆನೆಯನ್ನು ಕಾಡಿಗಟ್ಟಲು ಹೋಗಿ ಅಧಿಕಾರಿಗಳು ಪೇಚಿಗೆ ಸಿಲುಕಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ರೈತರ ಜಮೀನಿಗೆ ನುಗ್ಗಿದ ಆನೆಯನ್ನು ಕಾಡಿಗೆ ಓಡಿಸಲು ಅಧಿಕಾರಿಗಳು ಹರಸಾಹಸ ಪಡುವಂತಾಯ್ತು.

ಈ ವೇಳೆ ಆನೆ ಪ್ರತಿದಾಳಿ ಮಾಡಿದ್ದಕ್ಕೆ ಅರಣ್ಯ ಅಧಿಕಾರಿಗಳ ಜೀಪು ನಜ್ಜುಗುಜ್ಜಾಯಿತು. ಜೀಪು ಚಾಲಕ ಮತ್ತು ಅಧಿಕಾರಿಗಳಿಗೆ ಸಣ್ಣ-ಪುಟ್ಟ ಗಾಯಗಳು ಆಗಿವೆ. ಸದ್ಯ ಗಾಯಾಳು ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಸಾಹಸ ಪಟ್ಟು ಆನೆಯನ್ನು ಕೊನೆಗೂ ಓಂಕಾಎ ವಲಯದ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದ್ರು.

Share Post