CrimeDistricts

ಸಿಎಂ ಪತ್ನಿ ಕೇಳಿದ್ದು 13 ಸೈಟು, ಕೊಟ್ಟಿದ್ದು 14 ಸೈಟು!

ಮೈಸೂರು; ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಿನ್ನೆ ಹೈಕೋರ್ಟ್‌ ನಲ್ಲಿ ಮುಗಿದೆ.. ಆದೇಶವೊಂದೇ ಬಾಕಿ ಇದೆ.. ಆ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.. ಹೀಗಿರುವಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲದ ಅಪ್‌ಡೇಟ್‌ ಸಿಕ್ಕಿದೆ.. ಸಿಎಂ ಸಿದ್ದರಾಮಯ್ಯ ಅವರು ಪತ್ನಿಯವರು ಕೇವಲ 13 ಸೈಟುಗಳಿಗೆ ಖಾತೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದರೆ, 14 ಸೈಟುಗಳಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ..
ಸೈಟುಗಳ ನೋಂದಣಿ ಕೋರಿ 2022ರ ಜನವರಿ 1 ರಂದು ಪತ್ರ ಬರೆಯಲಾಗಿದೆ.. ಈ ಪತ್ರಕ್ಕೆ ಸಿಎಂ ಪಾರ್ವತಿ ಅವರ ಬದಲಿಗೆ ಸಿಎಂ ಖಾಸಗಿ ಆಪ್ತ ಸಹಾಯಕ ಎಸ್‌.ಜಿ.ದಿನೇಶ್‌ ಕುಮಾರ್‌ ಸಹಿ ಹಾಕಿದ್ದಾರೆ ಎನ್ನಲಾಗಿದೆ.. ಆರ್ಜಿದಾರರು ಬಿಟ್ಟು ಬೇರೆಯವರು ಸಹಿ ಹಾಕುವುದಕ್ಕೆ ಸಾಧ್ಯವಿಲ್ಲ.. ಸಿಎಂ ಖಾಸಗಿ ಆಪ್ತ ಸಹಾಯಕ ಸಹಿ ಹಾಕಿದ್ದರೂ ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ನಿವೇಶಕ್ಕೆ ಖಾತೆ ಮಾಡಿಕೊಡಲಾಗಿದೆ.. ಜೊತೆಗೆ ಕೇಳಿರೋದು 13 ಸೈಟುಗಳಾದರೆ ಖಾತೆ ಮಾಡಿಕೊಟ್ಟಿರೋದು 14 ಸೈಟುಗಳು ಎಂದು ಗೊತ್ತಾಗಿದೆ..
ಮುಡಾದಿಂದ ಮಂಜೂರಾದ ವಿಜಯನಗರ 3ನೇ ಹಂತ ಸಿ, ಡಿ, ಇ ಮತ್ತು ಜಿ ಬ್ಲಾಕ್​ನಲ್ಲಿ ನಿವೇಶನ ಸಂಖ್ಯೆ 25, 331,332,213, 214, 215, 05 ಮತ್ತು ವಿಜಯನಗರ 4ನೇ ಹಂತ 2ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065 ಮತ್ತು 12068 ಸಂಖ್ಯೆಯ ಒಟ್ಟು 13 ಸೈಟುಗಳಿಗೆ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿತ್ತು..

Share Post