ತನಿಖಾ ವರದಿ ಬಂದ ಮೇಲೆ ಗುತ್ತಿಗೆದಾರರ ಬಿಲ್ ಪಾವತಿ; ರಾಮಲಿಂಗಾರೆಡ್ಡಿ
ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಸೂಕ್ತವಾಗಿ ಆಗಿವೆಯೇ ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅದಕ್ಕಾಗಿ ನಾವು ಒಂದು ಸಮಿತಿಯನ್ನೇ ರಚನೆ ಮಾಡಿದ್ದೇವೆ. ಹೀಗಾಗಿ ತನಿಖಾ ವರದಿ ಬಂದ ಮೇಲೆ ಯಾರು ಕಾಮಗಾರಿ ನಡೆಸಿರುತ್ತಾರೋ ಅವರಿಗೆ ಬಿಲ್ ಪಾವತಿ ಮಾಡಲಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಮಗಾರಿ ಮಾಡಿದ್ದರೆ ಮಾತ್ರ ಬಿಲ್ ಸಿಗಲಿದೆ ಎಂದು ಹೇಳಿದರು.
ಬಿಜೆಪಿ ನಲವತ್ತು ಪರ್ಸೆಂಟ್ ಕಮೀಷನ್ ಪಡೆದಿರುವುದು ನಿಜ. ಅದು ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಸುಮ್ಮನೆ ನಮ್ಮ ಮೇಲೆ 15 ಪರ್ಸೆಂಟ್ ಕಮೀಷನ್ ಆರೋಪ ಮಾಡುತ್ತಿದ್ದಾರೆ. ಇದು ಸುಳ್ಳು ಆರೋಪ ಎಂದು ಹೇಳಿದರು.