ಲೋಕಸಭಾ ಚುನಾವಣೆ ವೇಳೆಗೆ ಡಿಕೆಶಿ ಜೈಲಿಗೆ ಹೋಗೋದು ಪಕ್ಕಾ; ಈಶ್ವರಪ್ಪ
ಹಾವೇರಿ; ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲೋಕಸಭಾ ಚನಾವಣೆಗೆ ಮುಂಚೆ ಅಥವಾ ಚುನಾವಣೆಯ ನಂತರ ಜೈಲಿಗೆ ಹೋಗೋದು ಪಕ್ಕಾ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ ತನಿಖೆ ಮುಂದುವರಿಸಲು ಅಭ್ಯಂತರ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿರೋದು ಕೂಡಾ ಬಹಿರಂಗವಾಗಿದೆ. ಸಿಬಿಐ ತನಿಖೆ ಆಗಿದೆ, ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಲೋಕಸಭಾ ಚುನಾವಣೆ ಮುನ್ನ ಅಥವಾ ಚುನಾವಣೆಯ ಬಳಿಕ ಡಿಕೆಶಿ ಜೈಲಿಗೆ ಹೋಗೋದು ಖಚಿತ ಎಂದು ಈಶ್ವರಪ್ಪ ಹೇಳಿದ್ದಾರೆ.