MES ಮೇಲೆ ಗೂಬೆ ಕೂರಿಸಲ್ಲವಂತೆ ಡಿ.ಕೆ.ಶಿವಕುಮಾರ್..!
ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆಯನ್ನುಯಾವುದೋ ಒಂದು ಸಂಘಟನೆ ಮಾಡಿತು ಎಂದು ನಾನು ಹೇಳುವುದಿಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.
ಶುಕ್ರವಾರ ತಡರಾತ್ರಿ ಎಂಇಎಸ್ ಪುಂಡರು, ಬೆಳಗಾವಿಯಲ್ಲಿ ದಾಳಿ ನಡೆಸಿದ್ದರು. ವಸತಿ ಕಟ್ಟಡಗಳು, ಹೋಟೆಲ್‌ಗಳ ಮೇಲೆ ಕಲ್ಲು ತೂರಿದ್ದರು. ಆನಗೋಳದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೂ ಹಾನಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಘಟನೆ ಹಿಂದೆ ಎಂಇಎಸ್ ಇದೆ ಎಂದು ಹೇಳಲ್ಲ. ಒಂದು ಸಂಘಟನೆಯನ್ನು ವೈಯಕ್ತಿಕವಾಗಿ ಡ್ಯಾಮೇಜ್ ಮಾಡೋಕೆ ನಾನು ಹೋಗೋದಿಲ್ಲ. ಕಿಡಿಗೇಡಿಗಳು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಅಂತಹ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.