CrimeNational

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಗುಂಡಿನ ದಾಳಿ!

ಪಾಟ್ನಾ; ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ.. ಈ ವೇಳೆ ಅಂಗಡಿ ಮಾಲೀಕ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಬೆಗುಸರಾಯ್‌ ಎಂಬಲ್ಲಿ ನಡೆದಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..
ನಾಲ್ವರು ದರೋಡೆಕೋರರು ಮೊದಲಿಗೆ ಗ್ರಾಹಕರಂತೆ ಜುವೆಲರಿ ಅಂಗಡಿಗೆ ಬರುತ್ತಾರೆ.. ಅದರಲ್ಲಿ ಇಬ್ಬರು ದರೋಡೆಕೋರರು ಮೊದಲ ಮಹಡಿಗೆ ತೆರಳಿ ಗನ್‌ ತೋರಿಸಿ ಬೆದರಿಸಿ ಚಿನ್ನಾಭರಣಗಳನ್ನು ಚೀಲಕ್ಕೆ ತುಂಬಿಸಿಕೊಂಡಿದ್ದಾರೆ.. ಈ ವೇಳೆ ಅಂಗಡಿಯಲ್ಲಿ ಮಾಲೀಕನ ಮಗ ಇದ್ದ ಎಂದು ಗೊತ್ತಾಗಿದೆ.. ಈ ವೇಳೆ ಗ್ರಾಹಕರು ಆತಂಕದಿಂದ ಅಡಗಿಕೊಳ್ಳುವ ದೃಶ್ಯಗಳು ಸೆರೆಯಾಗಿವೆ..
ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಮೋದ್ ಪೋದ್ದಾರ್ ಮನೆಯಲ್ಲಿದ್ದರು.. ಅಂಗಡಿಯ ಪಕ್ಕದಲ್ಲೇ ಮನೆ ಇತ್ತು.. ಚೀರಾಟ ಕೇಳಿ ಅವರು ಅಲ್ಲಿಗೆ ಬಂದಿದ್ದಾರೆ.. ದರೋಡೆಕೋರರನ್ನು ನೋಡಿ ಗನ್‌ನಿಂದ ಗುಂಡಿನ ದಾಳಿ ನಡೆಸಿದ್ದಾರೆ.. ಇಬ್ಬರ ಕಾಲಿಗೆ ಗುಂಡು ತಗುಲಿದ್ದರಿಂದ ಅವರು ಅಲ್ಲಿಯೇ ಕುಸಿದಿದ್ದಾರೆ.. ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.. ಆದ್ರೆ ಚಿನ್ನಾಭರಣ ಹೊಂದಿದ್ದ ಉಳಿದಿಬ್ಬರು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

Share Post