ಮಳವಳ್ಳಿಯಲ್ಲಿ ಅಪಹರಣಕ್ಕೆ ಯತ್ನ; ಕೈಕಚ್ಚಿ ತಪ್ಪಿಸಿಕೊಂಡ ಬಾಲಕ!
ಮಂಡ್ಯ; ಮಳವಳ್ಳಿಯಿಂದ ದುಷ್ಕರ್ಮಿಗಳು ಬಾಲಕನನ್ನು ಅಪಹರಣ ಮಾಡಿದ್ದು, ಅರ್ಧ ದಾರಿಯಲ್ಲಿ ಬಾಲಕ ಅಪಹರಣಕಾರರ ಕೈ ಕಚ್ಚಿ ತಪ್ಪಿಸಿಕೊಂಡಿದ್ದಾನೆ.. ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ.. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವವರ ಪುತ್ರ ಯೋಗೇಶ್ ಎಂಬ ಬಾಲಕನೇ ತಪ್ಪಿಸಿಕೊಂಡು ಬಂದಾತ..
ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಯೋಗೇಶ್ ಗೌಡಯ್ಯನ ಬೀದಿಯಲ್ಲಿ 3ನೇ ಕ್ರಾಸ್‌ನಲ್ಲಿರುವ ಮಾವನ ಮನೆಯಲ್ಲಿದ್ದ.. ಮಂಗಳವಾರ ಬೆಳಗ್ಗೆ ಹಳೇ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದ ವೇಳೆ ಓಮಿನಿ ಕಾರ್‌ನಲ್ಲಿ ಬಂದ ದುಷ್ಕರ್ಮಿಗಳು ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿದ್ದರು..
ಎಲ್ಲರೂ ಮಂಕಿ ಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ.. ಅಪಹರಣಕಾರರು ಪಿರಿಯಾಪಟ್ಟಣದಲ್ಲಿ ಕಾರು ನಿಲ್ಲಿಸಿ ಸಿಗರೇಟು ಸೇದುತ್ತಿದ್ದರು.. ಈ ವೇಳೆ ಅಪಹರಣಕಾರರ ಕೈಹಚ್ಚಿದ ಬಾಲಕ ಯೋಗೇಶ್ ಕಾರಿನಿಂದ ತಪ್ಪಿಸಿಕೊಂಡಿದ್ದಾನೆ.. ನಂತರ ಒಂದು ಕಿಲೋ ಮೀಟರ್ ಓಡಿಬಂದು ವ್ಯಕ್ತಿಯೊಬ್ಬರಿಂದ ಮೊಬೈಲ್ ಪಡೆದು ತನ್ನ ಮಾವನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.. ಕೂಡಲೇ ಸಂಬಂಧಿಕರು ಪಿರಿಯಾಪಟ್ಟಣಕ್ಕೆ ತೆರಳಿ ಬಾಲಕನನ್ನು ಕರೆದುಕೊಂಡು ಬಂದಿದ್ದಾರೆ.. ಅಪಹರಣಕಾರರು ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ..
ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ..