BengaluruPolitics

ಇಂದಿನಿಂದ ಅಕ್ಕಿ ಜೊತೆ ಹಣ; ವಿದ್ಯುತ್‌ ಕೂಡಾ ಇವತ್ತಿಂದ ಫ್ರೀ

ಬೆಂಗಳೂರು;  ಇಂದಿನಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಇನ್ನೆರಡು ಗ್ಯಾರೆಂಟಿಗಳು ಜಾರಿಗೆ ಬಂದಿವೆ. ಅನ್ನಭಾಗ್ಯ ಯೋಜನೆ ಇಂದಿನಿಂದ ವಿಸ್ತರಣೆಯಾಗುತ್ತಿದೆ. ಇನ್ನು ಇಂದಿನಿಂದ ಮನೆಗಳಿಗೆ ವಿದ್ಯುತ್‌ ಬಳಕೆ ಉಚಿತವಾಗಿದೆ. ತಿಂಗಳಿಗೆ 200 ಯೂನಿಟ್‌ವರೆಗೂ ಮನೆಬಳಕೆ ವಿದ್ಯುತ್‌ ಉಚಿತವಾಗಿ ಪಡೆಯಬಹುದಾಗಿದೆ.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿತ್ತು. ಆದ್ರೆ ಅಕ್ಕಿ ಸಿಗದ ಕಾರಣ, ಐದು ಕೆಜಿ ಅಕ್ಕಿ ಜೊತೆಗೆ ಉಳಿದ ಐದು ಕೆಜಿ ಅಕ್ಕಿ ಬದಲಾಗಿ 170 ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಅದರಂತೆ ಇಂದಿನಿಂದ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅಕ್ಕಿ ಜೊತೆಗೆ ಹಣ ಕೂಡಾ ಸಿಗಲಿದೆ. ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂಪಾಯಿ ಸಿಗಲಿದೆ.

ಇನ್ನು ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ 200 ಯೂನಿಟ್‌ ವರೆಗೆ ವಿದ್ಯುತ್‌ ಉಚಿತವಾಗಿ ಸಿಗಲಿದೆ. ಹೀಗಾಗಿ ಇಂದಿನಿಂದ ಬಳಸಿದ ವಿದ್ಯುತ್‌ಗೆ ಬಿಲ್‌ ಪಾವತಿ ಮಾಡಬೇಕಿರುವುದಿಲ್ಲ. ಆದ್ರೆ ಕೆಲ ಷರತ್ತುಗಳು ಅನ್ವಯಿಸುತ್ತವೆ.

 

Share Post