ದಾವಣಗೆರೆಯಲ್ಲಿ ಅಪಘಾತ – ಮೆಡಿಕಲ್ ವಿದ್ಯಾರ್ಥಿನಿ ಸಾವು
ದಾವಣಗೆರೆ : ಗುಜರಾತ್ ಮೂಲದ ಪ್ರಿಯಾಂಕ ಎಂಬ ವಿದ್ಯಾರ್ಥಿನಿ ದಾವಣಗೆರೆಯಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಸ್ಕೂಟಿಯಲ್ಲಿ ತೆರಳುವಾಗ ಅನಿರೀಕ್ಷಿತವಾಗಿ ಕಾರ್ ಒಂದಕ್ಕೆ ಗುದ್ದಿ ಪ್ರಿಯಾಂಕ ಪ್ರಾಣ ಬಿಟ್ಟಿದ್ದಾಳೆ.
ಜೆಜೆಎಂ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ಪ್ರಿಯಾಂಕ ಅವರ ತಲೆಗೆ ಏಟು ಬಿದ್ದು ತೀವ್ರ ರಕ್ತ ಸ್ರಾವವಾಗಿದೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅಸುನೀಗಿದ್ದಾರೆ. ದಾವಣಗೆರೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.